ಬೆಂಗಳೂರು: ಪ್ರತಿಯೊಂದು ಋತುವಿಗೆ ಅನುಸಾರವಾಗಿ ನಮ್ಮ ಆಹಾರದ ನಿಯಮಗಳು ಬದಲಾಗಬೇಕು. ಹಾಗಿದ್ದರೆ ಮಾತ್ರ ಆರೋಗ್ಯವೂ ಚೆನ್ನಾಗಿರುತ್ತದೆ.ವಾತಾವರಣದ ಬದಲಾವಣೆಗೆ ನಮ್ಮನ್ನು ಹೊಂದಿಕೊಳ್ಳಲು ಮನುಷ್ಯ ಆಹಾರದಲ್ಲಿ ಬದಲಾವಣೆ ಮಾಡಲೇಬೇಕಾಗುತ್ತದೆ. ನಮ್ಮ ದೇಶದಲ್ಲಿ ಮಳೆ, ಚಳಿ ಮತ್ತು ಬೇಸಿಗೆಗಾಲ ಎಂಬ ಮೂರು ಮುಖ್ಯ ಋತುಗಳಿವೆ. ಪ್ರತಿಯೊಂದು ಮುಖ್ಯ ಋತುವು ಎರಡು ಋತುಗಳಲ್ಲಿ ವಿಭಜನೆಯಾಗುತ್ತದೆ. ವಿಭಜನೆಯಾದ ಋತುವಿನಲ್ಲಿ ಎರಡು ತಿಂಗಳಿರುತ್ತವೆ. ಆರು ಋತುಗಳು ಸೇರಿ ಒಂದು ವರ್ಷವಾಗುತ್ತದೆ.ಶರದೃತುವಿನಲ್ಲಿನ ಆಹಾರ ಇದು ವಾತ ಸಂಚಯನದ ಕಾಲ ಮತ್ತು