ಬೆಂಗಳೂರು: ಶ್ರೀ ಗಕಾರ ಗಣಪತಿ ಅಷ್ಟೋತ್ತರ ಓದಿ ಪೂಜಿಸುವವರಿಗೆ ಬಹಳ ಬೇಗ ಫಲ ಸಿಗುವುದು. ಯಾವ ವಾರ ಓದಿದರೆ ಏನು ಫಲ ನೋಡೋಣ.ಭಾನುವಾರ: ಕೆಲಸದ ತೊಂದರೆಗಳು, ಕಿರುಕುಳ ನಿವಾರಣೆಯಾಗುವುದು. ಸೋಮವಾರ: ಮಾನಸಿಕ ನೆಮ್ಮದಿ ದೊರೆಯುವುದು. ಜುಗುಪ್ಸೆ ದೂರವಾಗುವುದು. ಮಂಗಳವಾರ: ಗೃಹ ಕಲಹ, ದಾಂಪತ್ಯ ಕಲಹಗಳು ದೂರವಾಗುವುದು. ಬುಧವಾರ: ವಿದ್ಯಾವಂತರೂ, ಜ್ಞಾನಿಗಳೂ ಆಗುತ್ತಾರೆ. ಗುರುವಾರ: ಓದಿದರೆ ನೀವು ಮಾಡುವ ಸಕಲ ಕಾರ್ಯಗಳೂ ನಿರ್ವಿಘ್ನವಾಗಿ ನೆರವೇರುವುದು. ಶುಕ್ರವಾರ: ಮನೆಯಲ್ಲಿ ಹಣಕಾಸಿನ ಸಮಸ್ಯೆ ದೂರವಾಗುವುದು.