ಬೆಂಗಳೂರು: ಇಂದು ಗೌರಿ ಹಬ್ಬದ ಸಂಭ್ರಮ. ಹೆಂಗಳೆಯರು ಇಂದು ತಮ್ಮ ಮುತ್ತೈದೆ ಭಾಗ್ಯ ಗಟ್ಟಿಯಾಗಿರಲೆಂದು ಬಾಗಿನ ಕೊಟ್ಟು ಸುಮಂಗಲಿಯರ ಆಶೀರ್ವಾದ ಪಡೆಯುತ್ತಾರೆ. ಇಂದು ಬಾಗಿನ ಕೊಡುವುದು ಯಾಕೆ ಅದರ ಅರ್ಥವೇನು ಎಂದು ನಿಮಗೆ ಗೊತ್ತಾ?ಮೊರದ ಬಾಗಿನಕ್ಕೆ ಸಂಸ್ಕೃತದಲ್ಲಿ ವೇಣು ಪಾತ್ರ ಎಂದು ಕರೆಯು6ತ್ತಾರೆ. ಮೊರದ ಬಾಗಿನದಲ್ಲಿ ನಾರಾಯಣನ ಅಂಶ ಇರುತ್ತದೆ. ಮೊರವೆಂಬ ನಾರಾಯಣ ಮತ್ತು ಮೊರದ ಒಳಗೆ ತುಂಬಿಡುವ ವಿವಿಧ ಧಾನ್ಯ, ಧವಸಗಳ ಮೂಲಕ ನೆಲೆಯಾಗಿರುವ ಲಕ್ಷ್ಮೀ ದೇವಿಯ ರೀತಿ