WDಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಂತೇ ನಮ್ಮ ರಾಜ್ಯದಲ್ಲಿ ಸರ್ಪ ಸಂಸ್ಕಾರ, ಸುಬ್ರಹ್ಮಣ್ಯ ಸೇವೆಗೆ ಹೆಸರು ವಾಸಿಯಾಗಿರುವ ಇನ್ನೊಂದು ದೇವಸ್ಥಾನವೆಂದರೆ ಘಾಟಿ ಸುಬ್ರಹ್ಮಣ್ಯ.ಬೆಂಗಳೂರು ಸಮೀಪ ದೊಡ್ಡ ಬಳ್ಳಾಪುರದಲ್ಲಿರುವ ಈ ದೇವಾಲಯದಲ್ಲಿ ಕಾರ್ತಿಕೇಯ ಮತ್ತು ನರಸಿಂಹ ದೇವರ ಮೂರ್ತಿ ಒಂದೇ ಕಡೆ ನೋಡಬಹುದು. ಸುಮಾರು 600 ವರ್ಷಗಳು ಹಳೆಯದಾದ ದೇವಸ್ಥಾನದಲ್ಲಿ ದೇವರ ಮೂರ್ತಿ ಭೂಮಿಯ ಅಡಿಯಿಂದಲೇ ಉದ್ಭವವಾಗಿದೆ ಎಂದು ನಂಬಲಾಗಿದೆ.ಸಾಮಾನ್ಯವಾಗಿ ಮಕ್ಕಳಾಗದ ದಂಪತಿ, ವಿವಾಹಾಪೇಕ್ಷಿತ ದಂಪತಿ, ಸರ್ಪದೋಷವವಿರುವವರು ಸುಬ್ರಹ್ಮಣ್ಯನ ಆರಾಧನೆ ಮಾಡಿದರೆ ಉತ್ತಮ.