ಸಾಮಾನ್ಯವಾಗಿ ಗೋಚಾರದಲ್ಲಿ ಗುರು ಮತ್ತು ಶನಿ ಒಂದು ರಾಶಿಯಿಂದ ಮುಂದಿನರಾಶಿಗೆ ಪ್ರವೇಶಿಸಿದಾಗ ಪ್ರತೀ ವ್ಯಕ್ತಿಗಳಲ್ಲೂ ಹಾಲಿ ನಡೆಯುತ್ತಿರುವ ದಶಾ ಮತ್ತು ಭಕ್ತಿ ಗ್ರಹಗಳ ಮೇಲೆ ಈ ಗುರು ಮತ್ತು ಶನಿ ತಮ್ಮ ತಮ್ಮ ಪ್ರಭಾವ ಬೀರುವುದರಿಂದ ಬದಲಾವಣೆಗಳು ಉಂಟಾಗುತ್ತವೆ. ಗುರು ನೈಸರ್ಗಿಕ ಶುಭಗ್ರಹವಾಗಿರುವುದರಿಂದ ಶುಭಫಲ ನೀಡುತ್ತಾನೆ. ಶನಿ ನೈಸರ್ಗಿಕ ಕೆಟ್ಟಫಲ ನೀಡುತ್ತಾನೆ. ಆದರೆ ನಾವು ಮಾಡುವ ಪ್ರತಿಯೊಂದು ಶುಭಕಾರ್ಯಗಳಿಗೆ ಅಂದರೆ ಮುಖ್ಯವಾಗಿ ವಿವಾಹ, ಗೃಹನಿರ್ಮಾಣ, ಸಂತಾನ, ವೃತ್ತಿ ವ್ಯವಹಾರಗಳು