ಬೆಂಗಳೂರು: ಐಶ್ವರ್ಯ, ಹಣ ಯಾರಿಗೆ ತಾನೇ ಬೇಡ? ಆದರೆ ಆ ಅದೃಷ್ಟ ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಹೇಗೆ ಗೊತ್ತಾ? ಅದಕ್ಕೆ ಕೆಲವೊಂದು ದಾರಿಗಳಿವೆ.ಲಕ್ಷ್ಮೀ ಗಣೇಶನ ಮೂರ್ತಿ ಮನೆಯಲ್ಲಿ ಲಕ್ಷ್ಮೀ ದೇವಿ ಮತ್ತು ಗಣೇಶ ದೇವರ ಬೆಳ್ಳಿಯ ವಿಗ್ರಹವಿಟ್ಟು ಪೂಜೆ ಮಾಡಿದರೆ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆಯಿದೆ.ಶಂಖ ದೇವರ ಮನೆಯಲ್ಲಿ ಶಂಖವಿಟ್ಟು ಪೂಜೆ ಸಲ್ಲಿಸುವುದರಿಂದ ಲಕ್ಷ್ಮೀ ದೇವಿ ಸಂಪ್ರೀತಳಾಗುತ್ತಾಳೆ. ಅದೇ ರೀತಿ ಪ್ರತಿ ನಿತ್ಯ ಸಂಜೆ ಶಂಖ ನಾದ ಮಾಡುವುದೂ ಒಳ್ಳೆಯದು.ತಾವರೆಯ ಬೀಜ