ನಿಂದನೆ ಮಾತಿಗೆ ಈ ರೀತಿ ಪ್ರತಿಕ್ರಿಯಿಸಿದರೆ ಅದು ನಮ್ಮ ಮೇಲೆ ಪರಿಣಾಮ ಬೀರದು!

ಬೆಂಗಳೂರು, ಮಂಗಳವಾರ, 19 ಫೆಬ್ರವರಿ 2019 (09:08 IST)

ಬೆಂಗಳೂರು: ನಿಂದನೆ ಎನ್ನುವುದು ಲೋಕಾರೂಢಿ. ನಿಂದಕರಿರಬೇಕು ಜಗದೊಳಗೆ ಎಂಬ ಮಾತಿಲ್ಲವೇ? ಹಾಗಾಗಿ ಯಾರಾದರೂ ನಮ್ಮನ್ನು ನಿಂದಿಸಿದರೆ ಅದನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎನ್ನುವುದರ ಮೇಲೆ ಅದರ ಪರಿಣಾಮ ನಮ್ಮ ಮೇಲೆ ಎಷ್ಟು ಬೀರುತ್ತದೆ ಎಂಬುದು ನಿರ್ಧಾರವಾಗುತ್ತದೆ.


 
ಬೈದಾಗ, ಹಂಗಿಸಿದಾಗ, ಅವಮಾನಿಸಿದಾಗ ಹೀಗೊಂದು ಮನಸ್ಥಿತಿಯನ್ನು ರೂಢಿಸಿಕೊಂಡರೆ ಜಗತ್ತನ್ನೇ ಗೆಲ್ಲಬಹುದು. ಅದಕ್ಕೆ ಮನಸ್ಸಿಗೆ ಒಂದು ಶಿಕ್ಷಣವನ್ನು ಹಾಕಿಕೊಳ್ಳಬೇಕು. ಅದು ಹೇಗೆ? ಇಲ್ಲಿ ನೋಡಿ.
 
ನಿಂದೆಯ ಪ್ರಕ್ರಿಯೆಯನ್ನು ಎರಡು ರೀತಿಯಲ್ಲಿ ಇಟ್ಟುಕೊಳ್ಳಬೇಕು. ಮೊದಲನೆಯದು, ನಿಂದೆಯ ಅಂಶಗಳು ನಮಗೆ ಹೊಂದುತ್ತದೆಯೇ ಎಂದು ಪರಿಶೀಲಿಸಬೇಕು. ಹೊಂದಿಕೊಳ್ಳುತ್ತಿದೆಯಾದರೆ ಅದು ನಿಂದನೆ ಅಲ್ಲ, ಜೀವನ ಮಾರ್ಗದರ್ಶನ ಎಂದುಕೊಳ್ಳಬೇಕು.
 
ಎರಡನೆಯದು, ನಿಂದೆ ಹೊಂದಿಕೊಳ್ಳದಿದ್ದರೆ ಅದು ನಿಂದಿಸಿದವರ ತಪ್ಪು ಗ್ರಹಿಕೆ. ಅವನಿಗಿನ್ನೂ ನಮ್ಮ ವ್ಯಕ್ತಿತ್ವದ ಅರಿವು ಸಿಕ್ಕಿಲ್ಲ ಎಂದರ್ಥ. ಸಾಧ್ಯವಾದರೆ ಅವನಿಗೆ ನಮ್ಮ ವ್ಯಕ್ತಿತ್ವದ ಪರಿಚಯ ಮಾಡಿಸೋಣ. ಇಲ್ಲವಾದರೆ ಅಯ್ಯೋ ಪಾಪ ಎಂದುಕೊಳ್ಳೋಣ. ಈ ಎರಡು ಮಾರ್ಗ ಅನುಸರಿಸಿದರೆ ಮನಸ್ಸು ಎಂದೂ ಕುಗ್ಗದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವೃತ್ತಿ ಬದುಕಿನ ಭವಿಷ್ಯ ಹೀಗಿರುತ್ತದೆ

ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ...

news

ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಉತ್ತಮ ಮತ್ತು ಕೆಟ್ಟ ಸ್ವಭಾವಗಳು ಹೀಗಿರುತ್ತವೆ!

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಿರುತ್ತದೆ. ದಿನಕ್ಕೊಂದು ರಾಶಿಯವರ ಗುಣ ಮತ್ತು ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಜಪ ಮಾಡುವ ಮೊದಲು ಬೆರಳುಗಳು ಹೇಗಿರಬೇಕು ಎಂದು ತಿಳಿದುಕೊಳ್ಳಿ

ಬೆಂಗಳೂರು: ಜಪ ಮಾಡುವಾಗ ಕೆಲವೊಂದು ನಿಯಮಗಳಿವೆ. ಆ ನಿಯಮಗಳನ್ನು ಪಾಲಿಸಿಕೊಂಡು ಜಪ ಮಾಡಿದರೆ ಮಾತ್ರ ಅದರ ಫಲ ...