ಬೆಂಗಳೂರು: ತಂದೆ ತಾಯಿಯರ ಋಣವನ್ನು ತೀರಿಸುವುದು ಸುಲಭವಲ್ಲ. ನಮ್ಮ ಪಿತೃಗಳ ಋಣ ತೀರಿಸಲು ಭಗವಂತ ನಮಗೆ ಸದವಕಾಶವನ್ನು ಕಲ್ಪಿಸಿದ್ದಾನೆ. ಅದು ಹೇಗೆ ಗೊತ್ತಾ?ಎಲ್ಲಾ ಋಣಗಳಿಗಿಂತ ಪಿತೃ ಋಣ ಮುಖ್ಯವಾದುದು. ನಮ್ಮ ತಂದೆ-ತಾಯಿಗಳು ಹಾಗೂ ಹಿರಿಯರು ತಮ್ಮ ಕಷ್ಟ ಲೆಕ್ಕಿಸದೇ ನಮಗಾಗಿ ಮಾಡಿರುವ ಪ್ರತಿಯೊಂದು ಕೆಲಸಗಳಿಂದಲೂ ನಮ್ಮ ಪಿತೃ ಋಣ ವೃದ್ಧಿಸುತ್ತದೆ.ಅದರ ಪರಿಹಾರಕ್ಕಾಗಿ ನಾವು ಮಾಡಬಹುದಾದ ಮುಖ್ಯ ಕೆಲಸವೆಂದರೆ ಅವರು ಬದುಕಿದ್ದಾಗ ಚೆನ್ನಾಗಿ ನೋಡಿಕೊಳ್ಳುವುದು. ಮರಣದ ನಂತರ ಅವರಿಗೆ ಮಾಡಬೇಕಾದ ಶ್ರಾದ್ಧ