ಬೆಂಗಳೂರು: ದೇವರಿಗೆ ನಮಸ್ಕಾರ ಮಾಡುವಾಗ ಹೇಗೇಗೋ ಮಾಡಿದರೆ ಅದರ ಫಲ ದೊರೆಯದು. ಅದಕ್ಕೆ ಯೋಗ್ಯ ಪದ್ಧತಿಯಿದೆ. ಅದರ ಸೂತ್ರಗಳನ್ನು ತಿಳಿಯೋಣ.ದೇವರಿಗೆ ನಮಸ್ಕಾರ ಮಾಡುವಾಗ ಮೊದಲು ಎದೆಯ ಮುಂದೆ ಎರಡೂ ಕೈಗಳ ಅಂಗೈಗಳನ್ನು ಒಂದರ ಮೇಲೊಂದಿಟ್ಟು ಕೈಗಳನ್ನು ಜೋಡಿಸಬೇಕು. ಕೈಗಳನ್ನು ಜೋಡಿಸುವಾಗ ಬೆರಳುಗಳನ್ನು ಸಡಿಲವಾಗಿಡಬೇಕು.ಕೈ ಬೆರಳುಗಳ ನಡುವೆ ಅಂತರವನ್ನು ಬಿಡದೇ ಬೆರಳುಗಳನ್ನು ಜೋಡಿಸಬೇಕು. ಕೈಗಳ ಬೆರಳುಗಳನ್ನು ಹೆಬ್ಬೆರಳುಗಳಿಂದ ದೂರವಿಡಬೇಕು. ಕೈಗಳನ್ನು ಜೋಡಿಸಿದ ನಂತರ ಸ್ವಲ್ಪ ಕೆಳಕ್ಕೆ ಬಾಗಬೇಕು. ಅಂಗೈಗಳನ್ನು ಜೋಡಿಸುವಾಗ ಟೊಳ್ಳು