ಬೆಂಗಳೂರು: ಪ್ರತಿಯೊಬ್ಬರೂ ಮನೆಯಲ್ಲಿ ಲಕ್ಷ್ಮೀ ದೇವಿಯ ಕೃಪಾಕಟಾಕ್ಷವಿರಬೇಕೆಂದು ಬಯಸುತ್ತಾರೆ. ಆದರೆ ಲಕ್ಷ್ಮೀ ದೇವಿಯನ್ನು ಒಂದು ದಿನ ಮಾತ್ರ ಪೂಜಿಸುವುದರಿಂದ ಆಕೆ ಪ್ರಸನ್ನವಾಗಲ್ಲ.ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬೇಕಾದರೆ ನಾವು ದಿನನಿತ್ಯ ಕೆಲವೊಂದು ಆಚರಣೆ ಮಾಡಬೇಕು. ಪ್ರತಿದಿನ ಸೂರ್ಯ ಹುಟ್ಟುವ ಮೊದಲೇ ಏಳುವುದು, ಮನೆ ಮುಂದೆ ಶುದ್ಧೀಕರಿಸಿ, ರಂಗೋಲಿ ಹಾಕುವುದು ಮಾಡಬೇಕು.ಪೂಜೆ ಮಾಡುವ ಮೊದಲು, ಊಟ ತಿಂಡಿ ತಯಾರಿಸುವ ಮೊದಲು ಮಹಿಳೆಯರು ತಲೆ ಸ್ನಾನ ಮಾಡಿ ಪರಿಶುದ್ಧವಾಗಬೇಕು. ಮುಖ್ಯವಾಗಿ ಮನೆಯಲ್ಲಿ ಹೆಣ್ಣು ಮಕ್ಕಳಿಗೆ