ಪ್ರತಿಯೊಬ್ಬನಿಗೂ ಗುರು ಬಲವೆಂಬುದು ಒಂದು ವಿಶಿಷ್ಟವಾದ ಸಾಧನೆಗೆ ಪೂರಕವಾದ ಅಂಶ. ಧನಕಾರಕ, ಜ್ಞಾನಕಾರಕ, ಪುತ್ರಕಾರನೂ ಆದ ಗುರುವು ಮಾನವನ ಜೀವನದ ಪ್ರಮುಖ ಅಂಶಗಳನ್ನು ನಿರ್ಣಯಿಸುವ ಪ್ರಭಾವಿ ಗ್ರಹವೆಂದರೂ ತಪ್ಪಲ್ಲ.ಹಾಗಾಗಿ ಗುರುವು ಜಾತಕದ ಕೇಂದ್ರಸ್ಥಾನವೆಂದು ಕರೆಯಲ್ಪಡುವ ಲಗ್ನ,ಚತುರ್ಥ,ಸಪ್ತಮ,ದಶಮ ಭಾವಗಳಲ್ಲಿ ಇದ್ದರೆ ಎಲ್ಲಾ ಬಗೆಯ ದೋಷವನ್ನೂ ನಾಶಮಾಡುತ್ತಾನೆ ಎಂಬ ಅಭಿಪ್ರಾಯ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ವ್ಯಕ್ತವಾಗಿವೆ.