2018ರಲ್ಲಿ ಕರ್ಕ ರಾಶಿಯ ಮಂದಿ ಹೀಗಿರುತ್ತಾರೆ ನೋಡ್ರಿ !

ಬೆಂಗಳೂರು, ಶನಿವಾರ, 30 ಡಿಸೆಂಬರ್ 2017 (13:59 IST)

ಕರ್ಕ ರಾಶಿಯಲ್ಲಿ ಜನಿಸಿದವರ ಗುಣಾವಗುಣಗಳು ಆ ರಾಶಿಯನ್ನು ಅವಲಂಬಿಸಿರುತ್ತದೆ. ಇಲ್ಲಿ ಮಕ್ಕಳು, ಸ್ತ್ರೀಯರು ಹಾಗೂ ಪುರುಷರೆಂಬ ವಿಭಾಗಗಳಲ್ಲಿ ಕರ್ಕ ರಾಶಿಯಲ್ಲಿ ಜನಿಸಿದವರ ಸ್ವಭಾವವನ್ನು ವಿವರಿಸಲಾಗಿದೆ.
ಮಕ್ಕಳು- ಕರ್ಕ ರಾಶಿಯ ಮಕ್ಕಳ ಮೂಡ್ ಆಗಾಗ ಬದಲಾಗುತ್ತಲೇ ಇರುತ್ತದೆ. ಈಗ ನಗುತ್ತಾ ಇದ್ದರೆ ಇನ್ನು ಸ್ವಲ್ಪ ಹೊತ್ತಿನಲ್ಲೇ ಪುಟ್ಟ ಕಾರಣಕ್ಕೆ ಮೂತಿ ಉದ್ದ ಮಾಡುವ ಗುಣ ಇವರದ್ದು. ಇವರು ಇನ್ನೊಬ್ಬರನ್ನು ನೋಡಿ ಕಲಿಯೋದು ಜಾಸ್ತಿ. ನೆನಪೂ ಜಾಸ್ತಿಯೇ. ತುಂಬ ಎಮೋಶನಲ್ ಆಗಿರುವ ಈ ಮಕ್ಕಳು ಕೆಲವೊಮ್ಮೆ ಒಬ್ಬರೇ ಇರಲು ಇಷ್ಟಪಡುತ್ತಾರೆ. ಮನೆಯ ವಾತಾವರಣ ಕರ್ಕ ರಾಶಿಯ ಮಕ್ಕಳ ಮೇಲೆ ಬಹಳ ಪರಿಣಾಮ ಬೀರುತ್ತದೆ. ಕುಟುಂಬದ ಜತೆಗೆ ಭಾವುಕ ಸಂಬಂಧವನ್ನು ಹೊಂದಿರುವ ಈ ಮಕ್ಕಳು ಪ್ರೀತಿಯ ಬಗ್ಗೆ ಮಾತನಾಡಲು ತುಂಬ ಸಂಕೋಚ ಹೊಂದಿದವರಾಗಿರುತ್ತಾರೆ. ಅಪ್ಪಿ ಮುದ್ದಾಡಲು ಈ ಮಕ್ಕಳು ಕೈಗೆ ಸಿಗೋದೇ ಇಲ್ಲ. ನಾಚಿಕೆಯಿಂದ ಓಡುತ್ತಾರೆ.
 
ಶಿಸ್ತಿನ ವಿಚಾರದಲ್ಲಿ ಈ ಮಕ್ಕಳನ್ನು ಸಂಭಾಳಿಸುವುದು ಇತರರಿಗೆ ಹೋಲಿಸಿದರೆ ಸುಲಭ. ಸ್ವಲ್ಪ ಗರ್ವಿಷ್ಟರಂತೆ, ಮಾತಿಗೆ ವಿರುದ್ಧ ನಡೆಯುವವರಂತೆ ಕಂಡರೂ ಇವರನ್ನು ಹೇಳಿದ ಹಾಗೆ ಕೇಳಿಸುವುದು ಕಷ್ಟವೇನಲ್ಲ. ಈ ಮಕ್ಕಳನ್ನು ಸ್ವಲ್ಪ ಬೈದರೂ ಮರ್ಯಾದೆಯೇ ಹೋದಂತೆ ಜೋರಾಗಿ ಅಳುತ್ತಾರೆ. ಈ ಮಕ್ಕಳನ್ನು ಅಲಕ್ಷ್ಯ ಮಾಡಬಾರದು. ಇದು ಅವರ ಮನಸ್ಸಿನ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಪ್ರೀತಿ ಕಾಳಜಿಯಿಂದ ಕರ್ಕ ರಾಶಿಯ ಮಕ್ಕಳನ್ನು ಬೆಳೆಸಿದರೆ, ಅವರ ಕನಸುಗಳಿಗೆ ಜೀವ ತುಂಬಿದರೆ, ಇವರು ಸಾಧನೆ ಮಾಡುತ್ತಾರೆ. ಅಪ್ಪ ಅಮ್ಮ ನೀಡಿದ ಹಣವನ್ನು ಇವರು ದುಂದು ವೆಚ್ಚ ಮಾಡುವುದಿಲ್ಲ. ಇವರಿಗೆ ಕುಟುಂಬದಿಂದ ತುಂಬ ರಕ್ಷಣೆ, ಪ್ರೀತಿ, ಆದರ ದೊರೆತರೆ ಇವರೂ ಕುಟುಂಬವನ್ನು ತುಂಬ ಅವಲಂಬಿಸುತ್ತಾರೆ. ಪ್ರೀತಿಯನ್ನೂ ತೋರಿಸುತ್ತಾರೆ.
 
ಪುರುಷ- ಕರ್ಕ ರಾಶಿಯ ಪುರುಷ ತುಂಬಾ ನಾಚಿಕೆಯ ಮನುಷ್ಯರಾಗಿರುತ್ತಾರೆ. ಮಾತು ಕಡಿಮೆ ದುಡಿಮೆ ಹೆಚ್ಚು ಎಂಬ ಗಾದೆ ಮಾತಿಗೆ ತಲೆಬಾಗುವವರು ಇವರು. ತಾನಾಯಿತು ತನ್ನ ಕೆಲಸವಾಯಿತು ಅಂತ ಮಾತನಾಡದೆ ಸುಮ್ಮನಿದ್ದುಬಿಡುತ್ತಾರೆ. ಇವರು ಇನ್ನೊಬ್ಬರ ಜತೆಗೆ ಸಲಿಗೆಯಿಂದ ವರ್ತಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಒಂದೇ ಸಲ ಕಂಡು ಪರಿಚಯವಾದಾಕ್ಷಣ ಹೆಗಲ ಮೇಲೆ ಕೈ ಹಾಕಿಕೊಂಡು ತಮಾಷೆ ಮಾತಾಡುತ್ತಾ ತನ್ನೆಲ್ಲವನ್ನೂ ಹೇಳಿಕೊಳ್ಳುವ ಜಾಯಮಾನದವರಲ್ಲ ಇವರು. ಕೆಲವೊಂದು ಸಂದರ್ಭಗಳಲ್ಲಿ ತುಂಬ ನರ್ವಸ್ ಆಗಿ ಕಾಣುತ್ತಾರಾದರೂ, ಇವರು ತುಂಬ ಧೈರ್ಯಶಾಲಿಗಳು, ಆತ್ಮವಿಶ್ವಾಸಿಗಳು. ಕೆಲವೊಮ್ಮೆ ತುಂಬ ಬೇಸರ ಮಾಡಿಕೊಳ್ಳುವುದು, ಖಿನ್ನರಾಗಿರುವ ಇವರನ್ನು ಯಾರಾದರೂ ಆತ್ಮೀಯರು ಸಮಾಧಾನ ಮಾಡಿದರೆ ಸಹಜ ಸ್ಥಿತಿಗೆ ಬರುತ್ತಾರೆ. ತುಂಬ ರೊಮ್ಯಾಂಟಿಕ್ ಆಗಿರುವ ಇವರು, ತುಂಬ ಕನಸು ಕಾಣುತ್ತಾರೆ. ಕನಸಿನ ಲೋಕದಲ್ಲೇ ವಿಹರಿಸುತ್ತಿರುತ್ತಾರೆ.
 
ಕೆಲವೊಮ್ಮೆ ಇವರು ಶುದ್ಧ ಒರಟರಂತೆಯೂ ಕಾಣಬಹುದು. ಆದರೆ ಕರ್ಕ ರಾಶಿಯ ಪುರುಷನನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಇವರು ಹೃದಯದಲ್ಲಿ ಮೆದು ಎಂಬುದು ಅರ್ಥವಾಗುತ್ತದೆ. ಒರಟರಾಗುವುದು ಇವರ ಗುಣವಾಗಿಲ್ಲ. ಆದರೆ ಅವರ ತುಂಬ ಖಾಸಗಿ, ಭಾವುಕ ವಿಷಯಗಳು ಬಂದರೆ ಅವರು ಇನ್ನೊಬ್ಬರ ಜತೆಯಲ್ಲಿ ತಮ್ಮನ್ನು ತಾವು ರಕ್ಷಿಸಲು ಒರಟರಂತೆ ವರ್ತಿಸುತ್ತಾರೆ.
 
ಇವರಿಗೆ ದುಂದುವೆಚ್ಚ ಇಷ್ಟವಿಲ್ಲ. ತಮ್ಮದೇ ಸ್ಟೈಲನ್ನು ಹೊಂದಿರುವ ಇವರು ಬಿಲ್ ಪಾವತಿಯಲ್ಲಿ ಪಕ್ಕಾ ಆಗಿರುತ್ತಾರೆ. ಹಾಗಂತ ಇವರು ಪಿಟ್ಟಾಸಿಗಳಲ್ಲ. ಕರ್ಕ ರಾಶಿಯ ಪುರುಷ ಯಾವಾಗಲು ತನ್ನ ಲುಕ್, ತನ್ನ ಮನೆ, ತನ್ನ ಕಾರು ಹಾಗೂ ತನ್ನದೆಲ್ಲದರ ಬಗ್ಗೆ ವಿಪರೀತ ಕಾಳಜಿ, ಆಸ್ಥೆ ಹೊಂದಿರುತ್ತಾನೆ. ಅಲ್ಲದೆ, ಇವರು ತಮ್ಮ ಅಮ್ಮನನ್ನು ವಿಪರೀತ ಪ್ರೀತಿಸುತ್ತಾರೆ. ಆಕೆಯಿಲ್ಲದೆ ಇವರಿಗೆ ಇರಲೂ ಸಾಧ್ಯವಿಲ್ಲ. ಯಾವಾಗಲೂ ಅಮ್ಮನ ಕೈಯಡುಗೆ, ಅಮ್ಮನ ಆರೈಕೆ ಎಲ್ಲವನ್ನು ಇಷ್ಟಪಡುವವರು. ಇಲ್ಲವಾದರೆ, ಕೆಲವರು ವಿಪರೀತ ಅಮ್ಮನನ್ನು ದ್ವೇಷಿಸುವವರೂ ಇರುತ್ತಾರೆ. ಒಂದೋ ವಿಪರೀತ ಪ್ರೀತಿ. ಇಲ್ಲವಾದರೆ ವಿಪರೀತ ದ್ವೇಷ.
 
ಲವ್ ವಿಷಯದಲ್ಲಿ ಹೇಳೋದಾದರೆ, ಕರ್ಕ ರಾಶಿಯ ಪುರುಷ ತ್ನ ಸಂಗಾತಿಯನ್ನು ತುಂಬ ಪ್ರೀತಿಸುತ್ತಾನೆ. ಪ್ರೀತಿ, ಕಾಳಜಿ, ಆಸ್ಥೆ, ಗೌರವ ಎಲ್ಲವನ್ನೂ ನೀಡುತ್ತಾನೆ. ಅಲ್ಲದೆ ಅದರ ಜತೆಯೇ ತನ್ನ ಸ್ಟಾಂಡರ್ಡ್‌ಗೆ ತಕ್ಕಂತೆ ತನ್ನ ಸಂಗಾತಿಯೂ ಇರಬೇಕೆಂದು ಆತ ಬಯಸುತ್ತಾನೆ. ಮಕ್ಕಳನ್ನೂ ಅಪಾರ ಪ್ರೀತಿಸುವ ಕರ್ಕ ರಾಶಿಯ ಪುರುಷರು ಮಕ್ಕಳ ವಿಷಯದಲ್ಲಿ ತುಂಬ ತಾಳ್ಮೆಯಿಂದ ವರ್ತಿಸುತ್ತಾರೆ. ಹೆಣ್ಣುಮಗಳಿದ್ದರೆ ತುಂಬ ಕಾಳಜಿ, ರಕ್ಷಣೆ, ಪ್ರೀತಿ ತೋರುವ ಕರ್ಕ ರಾಶಿಯ ಅಪ್ಪ, ಗಂಡು ಮಗನಾದರೆ ಹೆಮ್ಮೆಯಿಂದ ತನ್ನ ಮಗನನ್ನು ಕಾಣುತ್ತಾನೆ.
 
ಮಹಿಳೆ- ಕರ್ಕ ರಾಶಿಯ ಸ್ತ್ರೀಯರು ಎಂದಾದರೂ ಭೇಟಿಯಾಗಿದ್ದೀರಾ? ಹಾಗಾದರೆ ನಿಮಗೆ ಆಕೆಯ ಬಗ್ಗೆ ಸ್ವಲ್ಪ ಕನ್ಫೂಷನ್ ಆಗಿರುವುದು ಸಹಜ. ಆಕೆಯ ಸ್ವಭಾವವೇ ಹಾಗೆ, ಆಕೆ ಗಂಭೀರವೋ, ತಿಕ್ಕಲುತನವೋ, ಅಥವಾ ಏಕಾಂಗಿಯೋ... ಒಂದೂ ನಿಮಗೆ ಅರ್ಥವಾಗಲಾರದು. ಮೀನಿನ ಹೆಜ್ಜೆ ತಿಳಿಯಲಾಗದಂತೆ ಹೆಣ್ಣಿನ ಮನಸ್ಸೂ ಕೂಡಾ ಅಂತಾರಲ್ಲ, ಹಾಗೆ ಕರ್ಕ ರಾಶಿಯ ಹುಡುಗಿಯ ಮನಸ್ಸಿನಲ್ಲಿ ಏನು ಕುಣಿಯುತ್ತಿದೆ ಎಂದು ಖಂಡಿತ ಆರ್ಥವಾಗಲಾರದು. ಆದರೆ, ನಿಜಕ್ಕೂ ಕರ್ಕ ರಾಶಿಯ ಸ್ತ್ರೀ ತುಂಬ ಸೆನ್ಸಿಟಿವ್, ಭಾವುಕ, ದಯೆಯುಳ್ಳವಳು ಹಾಗೆಯೇ ತಾನು ಪ್ರೀತಿಸುವವರ ಮೇಲೆ ಕಾಳಜಿಯನ್ನೂ ಹೊಂದಿರುವವಳು. ಈಕೆಯ ಸತ್ಯದರ್ಶನವಾಗಬೇಕಿದ್ದರೆ ನೀವು ಆಕೆಯ ಜತೆಗೊಂದು ಬೆಳದಿಂಗಳ ರಾತ್ರಿಯಲ್ಲಿ ಭಾವುಕ ಗಳಿಗೆಗಳನ್ನು ಕಳೆಯಬೇಕು. ಆಗ ಆಕೆ ಏನು ಎಂಬುದು ನಿಮಗೆ ಅರ್ಥವಾಗಬಹುದು.
 
ಪ್ರೀತಿ ಅಥವಾ ಪ್ರೇಮದಲ್ಲಿ ಬಿದ್ದಾಗ ಆಕೆ ಖಂಡಿತವಾಗಿಯೂ ಸಾಕ್ಷಾತ್ ಸ್ತ್ರೀ ರೂಪವೇ. ಪ್ರೀತಿ, ಕಕ್ಕುಲತೆ, ಕಾಳಜಿ ಎಲ್ಲವನ್ನೂ ಧಾರಾಳವಾಗಿ ಸುರಿಯುತ್ತಾಳೆ. ಆದರೆ ಈಕೆ ತೆಗಳಿಕೆಯನ್ನು ಸಹಿಸುವುದಿಲ್ಲ. ಲವ್ ವಿಚಾರದಲ್ಲಿ ಮೊದಮೊದಲು ಆಕೆ ಹಿಂಜರಿಯುವುದು ಆಕೆಯ ನಾಚಿಕೆಯ ಸ್ವಭಾವದಿಂದ. ಅಥವಾ ತಾನೇ ಪ್ರೊಪೋಸ್ ಮಾಡಿಬಿಟ್ಟರೆ ಆತ ನನ್ನನ್ನು ರಿಜೆಕ್ಟ್ ಮಾಡಿಬಿಟ್ಟರೆ ಎಂಬ ಸಣ್ಣ ಭಯವೂ ಕರ್ಕ ರಾಶಿಯ ಹುಡುಗಿಯರಿಗಿರುತ್ತದೆ. ಹಾಗಾಗಿ ಅವರ ಮನದಲ್ಲೊಂದು ಪ್ರೀತಿ ಹುಟ್ಟಿದರೂ ಅವರು ನೇರವಾಗಿ ಹೇಳುವ ಸಾಹಸ ಮಾಡುವುದು ಕಡಿಮೆಯೇ.
 
ಕರ್ಕ ರಾಶಿಯ ಮಹಿಳೆ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾರೆ. ಅಷ್ಟೇ ಅಲ್ಲ, ಇವರು ತುಂಬ ಚೆಂದಕ್ಕೂ ಇರುತ್ತಾರೆ. ತುಂಬ ಬೇಗ ಇನ್ನೊಬ್ಬರಿಂದ ಬೇಸರ ಮಾಡಿಕೊಳ್ಳುವ ಇವರು ತುಂಬೂ ಮೂಡಿಗಳು. ಅರ್ಥಾತ್ ಇವರ ಮೂಡ್ ಆಗಾಗ ಬದಲಾಗುತ್ತಾ ಇರುತ್ತದೆ. ಈಗಷ್ಟೇ ನಗುತ್ತಿದ್ದ ಆಕೆ ತತ್ಕ್ಷಣವೇ ರೇಗಿ ಬಿಡಬಹುದು. ಅಥವಾ ಮಗುಮ್ಮಾಗಿ ಕುಳಿತುಬಿಡಬಹುದು. ಆದರೂ ಇವರು ತಮ್ಮ ಪ್ರೀತಿಪಾತ್ರನ ಜತೆಗೆ ಎಂದೆಂದಿಗೂ ಸುಖವಾಗಿ ಸಂಸಾರ ಮಾಡುತ್ತಾರೆ. ತುಂಬ ನಿಷ್ಠರಾಗಿರುತ್ತಾರೆ ಕೂಡಾ.
 
ತಮ್ಮ ಬ್ಯಾಡ್ ಲಕ್ ಬಗ್ಗೆ ಹಳಿದುಕೊಳ್ಳುತ್ತಾ ಕೂರುವ ಜಾಯಮಾನ ಇವರದಲ್ಲ. ಒಮ್ಮೆ ಕಣ್ಣೀರು ಹರಿಸಿದರೂ ಮತ್ತೆ ಕಣ್ಣೀರು ಒರೆಸಿ ಬೇರೆ ಕೆಲಸಕ್ಕೆ ಕೈ ಹಚ್ಚುತ್ತಾರೆ. ತುಂಬ ಪೊಸೆಸಿವ್ ಕೂಡಾ ಅಲ್ಲದ ಈಕೆಗೆ ಅಸೂಯೆಯೂ ಕಡಿಮೆಯೇ. ಜತೆಗೆ ತನ್ನ ಪ್ರೀತಿಯ ವಿಚಾರವನ್ನು ಇನ್ನೊಬ್ಬರ ಜತೆಗೆ ಹಂಚಿಕೊಳ್ಳುವುದೂ ಈಕೆಗೆ ಇಷ್ಟವಾಗುವುದಿಲ್ಲ. ಆದರೆ ಆಕೆ ಖಿನ್ನಳಾದಾಗ ಸ್ವಲ್ಪ ಹೆಚ್ಚು ನಿಮ್ಮ ಕಾಳಜಿಯನ್ನು ತೋರಬೇಕು. ಇಲ್ಲವಾದರೆ ಆಕೆ ಇನ್ನೂ ಮುದುಡಿಕೊಳ್ಳುತ್ತಾಳೆ. ಮಕ್ಕಳ ವಿಚಾರದಲ್ಲಿ ಕರ್ಕ ರಾಶಿಯ ಹೆಣ್ಣು ಮಕ್ಕಳು ತುಂಬಾ ಕಾಳಜಿ, ರಕ್ಷಣೆ ಒದಗಿಸುತ್ತಾರೆ. ಪ್ರೀತಿಯ ಮಳೆಯನ್ನೇ ಮಕ್ಕಳಿಗೆ ಉಣಬಡಿಸುತ್ತಾಳೆ.
 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

2018 ರಲ್ಲಿ ಸಿಂಹ ರಾಶಿಯವರ ಭವಿಷ್ಯ

ಸಿಂಹ ರಾಶಿಯ ಮಕ್ಕಳು ಯಾವಾಗಲೂ ಗುಂಪಿನಲ್ಲಿ ನಾಯಕರಾಗಿರುತ್ತಾರೆ. ಅದು ಆಟದ ಮೈದಾನದಲ್ಲಿರಬಹುದು, ಅಥವಾ ...

news

2018ರಲ್ಲಿ ನಿಮ್ಮ ರಾಶಿಗಳ ಮೇಲೆ ಯಾವ ರೀತಿ ಪ್ರಭಾವವಿದೆ ಗೊತ್ತಾ?

2017ರ ಕಹಿ ನೆನೆಪುಗಳನ್ನು ಮರೆಯುವುದರೊಂದಿಗೆ ಹೊಸ ವರ್ಷವನ್ನು ತಮಾಷೆ, ಸಂಭ್ರಮ ಮತ್ತು ಸಂತಸದಿಂದ ...

news

ಆರ್ಥಿಕ ವೃದ್ಧಿಗೆ ವಾಸ್ತು ಟಿಪ್ಸ್

ವಾಸ್ತು ಒಂದು ವ್ಯವಸ್ಥೆಯ ರೀತಿಯಲ್ಲಿರುತ್ತದೆ. ಇದು ನೇರವಾಗಿ ನಿಮ್ಮ ಹಣೆಬರಹಕ್ಕೆ ಸಂಬಂಧಿಸಿದೆ. ಆದ್ದರಿಂದ ...

news

ನಿಮ್ಮ ಮದುವೆ ಯಾವಾಗ ಆಗುತ್ತೆ ಗೊತ್ತಾ ? ಕನಸಿನಿಂದ ತಿಳಿದುಕೊಳ್ಳಿ

ಕನಸಿನಲ್ಲಿ ಕಸೂತಿ ಬಟ್ಟೆಗಳು ಕಂಡರೆ, ನಿಮಗೆ ಸುಂದರವಾದ ಮತ್ತು ಪವಿತ್ರ ಹುಡುಗಿ/ಹುಡುಗನ ಜೊತೆಗೆ ...