ಶನಿಯ ರಾಶಿ ಪರಿವರ್ತನೆ ಆಗುತ್ತಿದ್ದಂತೆ ಸಾಮಾನ್ಯವಾಗಿ ಜನರು ಭಯಭೀತರಾಗುತ್ತಾರೆ. ಶನಿದೇವನ ಕಾಟದಿಂದ ಇನ್ನೇನು ತೊಂದರೆಗಳಾಗುತ್ತೋ... ಅಥವಾ ಕಾರ್ಯಗಳಲ್ಲಿ ಏನೇನು ವಿಘ್ನ ಸಂಭವಿಸುತ್ತೋ ಎಂಬ ದುಗುಡ ಹೆಚ್ಚುತ್ತದೆ. ಅದರಲ್ಲೂ ಕೆಲವು ಮಂದಿಗೆ ತಮ್ಮ ರಾಶಿ, ನಕ್ಷತ್ರ, ಜನ್ಮ ಕುಂಡಲಿಯ ಪರಿಚಯವೇ ಇರೋದಿಲ್ಲ. ಯಾವುವೆಂಬುದರ ಗಂಧಗಾಳಿಯೂ ತಿಳಿದಿರುವುದಿಲ್ಲ. ಅಂತಹ ಸಂದರ್ಭ ಹಲವು ಜ್ಯೋತಿಷ್ಯದ ವಿಚಾರಗಳನ್ನು ಓದುವಾಗ ಅಂಥವರಲ್ಲಿ ಭಯ, ದುಗುಡ, ಗೊಂದಲ ಹೆಚ್ಚುವುದು ಸಾಮಾನ್ಯ. ತಮಗೆ ಮುಂದೇನು ಕಾದಿದೆಯೋ, ತನ್ನ ರಾಶಿ ಯಾವುದೆಂದೇ