ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು, ಸೋಮವಾರ, 18 ಫೆಬ್ರವರಿ 2019 (08:35 IST)

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


 
ಮೇಷ: ಇಂದು ವಿರಾಮದ ದಿನದ ಖುಷಿ ಅನುಭವಿಸಲಿದ್ದೀರಿ. ಆದರೆ ಮನೆಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಖರ್ಚು ವೆಚ್ಚಗಳು ಅಧಿಕವಾಗುವುದು. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಮಕ್ಕಳೊಂದಿಗೆ ವಾಗ್ವಾದ ನಡೆಸದೇ ಇದ್ದರೆ ಒಳ್ಳೆಯದು.
 
ವೃಷಭ: ಸಹೋದರರೊಂದಿಗೆ ವಾಗ್ವಾದಕ್ಕಿಳಿಯಬೇಡಿ. ಆಸ್ತಿ ಸಂಬಂಧಿತ ಕಲಹಗಳಿಗೆ ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ. ಅವಿವಾಹಿತರಿಗೆ ವಿವಾಹ ಭಾಗ್ಯಕ್ಕೆ ಸ್ವಲ್ಪ ದಿನ ಕಾಯಬೇಕಾಗಬಹುದು. ಎಚ್ಚರಿಕೆ ಅಗತ್ಯ.
 
ಮಿಥುನ: ನಿಮ್ಮ ಕೆಲಸಗಳಿಗೆ ಉದ್ಯೋಗ ಕ್ಷೇತ್ರದಲ್ಲಿ ಮನ್ನಣೆ ಸಿಗುವುದು. ಇದರಿಂದ ಮುನ್ನಡೆ, ಆರ್ಥಿಕ ಲಾಭ ಗಳಿಸುವಿರಿ. ಸಂಗಾತಿಯ ಪ್ರೀತಿಗೆ ಪಾತ್ರರಾಗುವಿರಿ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾದರೂ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ.
 
ಕರ್ಕಟಕ: ನಿಧಾನವಾಗಿ ಅಭಿವೃದ್ಧಿ ನಿಮ್ಮ ಗಮನಕ್ಕೆ ಬರುವುದು. ಆರ್ಥಿಕ ಮುಗ್ಗಟ್ಟುಗಳು ದೂರವಾಗುವುದು, ಕುಟುಂಬದಲ್ಲೂ ಭಿನ್ನಾಭಿಪ್ರಾಯಗಳು ಮರೆಯಾಗುವುದು. ಆದರೆ ಆರೋಗ್ಯ ಹದಗೆಡುವ ಸಂಭವವಿದೆ. ಎಚ್ಚರಿಕೆ ಅಗತ್ಯ.
 
ಸಿಂಹ: ಕೆಲವೊಂದು ಅನಿರೀಕ್ಷಿತ ಘಟನೆಗಳು ನಿಮ್ಮ ಜೀವನದ ದಿಕ್ಕು ಬದಲಿಸಲಿದೆ. ವಾಸ ಸ್ಥಳ ಬದಲಾವಣೆ ಮಾಡಲಿದ್ದೀರಿ. ಸಂಗಾತಿಯೊಡನೆ ಭಿನ್ನಾಭಿಪ್ರಾಯ ಮಾಡಿಕೊಳ್ಳದಿರಿ. ಖರ್ಚು ವೆಚ್ಚಗಳು ಅಧಿಕವಾಗುವುದು.
 
ಕನ್ಯಾ: ಮನೆಯಲ್ಲಿ ವಿವಾಹ ಸಂಬಂಧೀ ಶುಭ ಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಮಕ್ಕಳಿಗೆ ವಿದ್ಯಾಭ್ಯಾಸ ಪ್ರಯುಕ್ತ ವಿದೇಶ ಪ್ರಯಾಣ ಯೋಗವೂ ಇದೆ. ದೂರ ಸಂಚಾರದಲ್ಲಿ ಕಳ್ಳತನ ಭೀತಿಯಿದೆ. ಎಚ್ಚರವಾಗಿರಿ.
 
ತುಲಾ: ಮಿತ್ರರೊಂದಿಗೆ ಸಂಘರ್ಷ ಮಾಡಿಕೊಳ್ಳುವಿರಿ. ಇದರಿಂದ ನಿಮ್ಮ ವ್ಯವಹಾರಗಳಿಗೆ ತೊಡಕಾಗುವುದು. ಹಿರಿಯರೊಂದಿಗೆ ವಾಗ್ವಾದಕ್ಕಿಳಿಯದಿರಿ. ನಿಮ್ಮ ಕೆಲವೊಂದು ಸ್ವಭಾವದಿಂದ ಪ್ರೀತಿ ಪಾತ್ರರಿಗೆ ನೋವುಂಟುಮಾಡುವಿರಿ. ತಾಳ್ಮೆಯಿಂದಿರಿ.
 
ವೃಶ್ಚಿಕ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಅವಿವಾಹಿತರಿಗೆ ಮನಸ್ಸಿಗೆ ಹಿಡಿಸಿದ ಸಂಬಂಧ ಕೂಡಿಬರುವುದು. ಆದರೆ ಪ್ರೇಮಿಗಳಿಗೆ ಹಿರಿಯರಿಂದ ವಿರೋಧ ವ್ಯಕ್ತವಾಗಲಿದೆ. ವಿದ್ಯಾರ್ಥಿಗಳಿಗೆ ತೀವ್ರ ಪ್ರಯತ್ನ ಬಲ ಅಗತ್ಯ.
 
ಧನು: ಸಹೋದರರಿಂದ ಕಿರಿ ಕಿರಿ ತಪ್ಪದು. ನಿಮ್ಮ ಮಾತಿನ ಮೇಲೆ ಕಡಿವಾಣ ನಿಮಗಿಲ್ಲದೇ ಹೋದರೆ ಸಂಗಾತಿ ಜತೆಗೂ ಮನಸ್ತಾಪವಾಗುವುದು. ಆರೋಗ್ಯ ಭಾಗ್ಯವಿರದು. ಆದರೆ ಆರ್ಥಿಕ ಲಾಭಕ್ಕೆ ಕೊರತೆಯಿರದು.
 
ಮಕರ: ಎಷ್ಟೋ ದಿನದಿಂದ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆ ದೂರವಾಗಿ ನೆಮ್ಮದಿ ಕಾಣುವಿರಿ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಿ ಮನೆಯಲ್ಲಿ ಸಂತಸದ ವಾತಾವರಣವಿರುವುದು. ಸಾಲಗಾರರಿಂದ ಮುಕ್ತಿ ಸಿಗಲಿದೆ.
 
ಕುಂಭ: ಬಾಕಿ ಹಣ ಸಂದಾಯವಾಗಿ ಆರ್ಥಿಕವಾಗಿ ಲಾಭ ಗಳಿಸುವಿರಿ. ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಆದರೆ ಚಾಲನೆ ವೃತ್ತಿಯಲ್ಲಿರುವವರಿಗೆ ಅಪಘಾತದ ಭಯವಿದೆ. ಹೆಚ್ಚಿನ ನೆಮ್ಮದಿಗೆ ಕುಲದೇವರ ಆರಾಧನೆ ಮಾಡಿ.
 
ಮೀನ: ಬಾಕಿ ಇರುವ ಹರಕೆ ಸಂದಾಯ ಮಾಡುವಿರಿ. ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಘಟನೆ ನಡೆಯಲಿದೆ. ಇದರಿಂದ ಮಾನಸಿಕವಾಗಿ ಬೇಸರದಲ್ಲಿರುವಿರಿ. ಆದರೆ ಮಕ್ಕಳಿಂದ ಶುಭ ವಾರ್ತೆ ಸಿಗುವುದು. ದಿನದಂತ್ಯಕ್ಕೆ ಶುಭ ಸುದ್ದಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವೃತ್ತಿ ಬದುಕಿನ ಭವಿಷ್ಯ ಹೀಗಿರುತ್ತದೆ

ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ...

news

ಜನ್ಮ ದಿನಾಂಕಕ್ಕೆ ಅನುಗುಣವಾಗಿ ಈ ವರ್ಷ ನಿಮ್ಮ ಭವಿಷ್ಯ ಹೇಗಿರುತ್ತದೆ ಗೊತ್ತಾ?

ಬೆಂಗಳೂರು: ಜನ್ಮ ದಿನಾಂಕಕ್ಕೆ ಅನುಗುಣವಾಗಿ ಒಬ್ಬೊಬ್ಬರಿಗೆ ಅದೃಷ್ಟ ಸಂಖ್ಯೆ ಎಂದಿರುತ್ತದೆ. ಆಯಾ ಜನ್ಮ ...

news

ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಉತ್ತಮ ಮತ್ತು ಕೆಟ್ಟ ಸ್ವಭಾವಗಳು ಹೀಗಿರುತ್ತವೆ!

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಿರುತ್ತದೆ. ದಿನಕ್ಕೊಂದು ರಾಶಿಯವರ ಗುಣ ಮತ್ತು ...