Widgets Magazine

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು| Krishnaveni K| Last Modified ಭಾನುವಾರ, 31 ಮಾರ್ಚ್ 2019 (08:45 IST)
 ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

 
ಮೇಷ: ಇಂದು ವಿರಾಮದ ದಿನದ ಖುಷಿ ಅನುಭವಿಸಲಿದ್ದೀರಿ. ಆದರೆ ಮನೆಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಖರ್ಚು ವೆಚ್ಚಗಳು ಅಧಿಕವಾಗುವುದು.  ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ಆಸ್ಪತ್ರೆ ಅಲೆದಾಟ ನಿಶ್ಚಿತ.
 
ವೃಷಭ: ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವ ಸಾಧ್ಯತೆಯಿದೆ. ಆಸ್ತಿ ಸಂಬಂಧಿತ ಕಲಹಗಳಿಗೆ ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ. ನಿರುದ್ಯೋಗಿಗಳು ಸ್ವಲ್ಪ ದಿನ ಕಾಯಬೇಕಾಗಬಹುದು. ಎಚ್ಚರಿಕೆ ಅಗತ್ಯ.
 
ಮಿಥುನ: ನೀರಿಗೆ ಸಂಬಂಧಿಸಿದಂತೆ ನೆರೆಹೊರೆಯವರೊಂದಿಗೆ ಕಲಹ ಮಾಡಿಕೊಳ್ಳುವಿರಿ. ಮನಸ್ಸಿಗೆ ನೆಮ್ಮದಿ ಇರದು. ಆದರೆ ಸಂಗಾತಿಯ ಪ್ರೀತಿಗೆ ಪಾತ್ರರಾಗುವಿರಿ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾದರೂ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ.
 
ಕರ್ಕಟಕ: ನಿಧಾನವಾಗಿ ಅಭಿವೃದ್ಧಿ ನಿಮ್ಮ ಗಮನಕ್ಕೆ ಬರುವುದು. ಉದ್ಯೋಗ ನಿಮಿತ್ತ ಇದ್ದ ಕಂಟಕಗಳು ದೂರವಾಗುವುದು.  ಹೊಸ ವ್ಯವಹಾರಗಳಲ್ಲಿ ಜಯ ಗಳಿಸುವಿರಿ. ಆದರೆ ಆರೋಗ್ಯ ಹದಗೆಡುವ ಸಂಭವವಿದೆ. ಎಚ್ಚರಿಕೆ ಅಗತ್ಯ.
 
ಸಿಂಹ: ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ.. ವಾಸ ಸ್ಥಳ ಬದಲಾವಣೆ ಮಾಡಲಿದ್ದೀರಿ. ಸಂಗಾತಿಯೊಡನೆ ಭಿನ್ನಾಭಿಪ್ರಾಯ ಮಾಡಿಕೊಳ್ಳದಿರಿ. ಖರ್ಚು ವೆಚ್ಚಗಳು ಅಧಿಕವಾಗುವುದು.
 
ಕನ್ಯಾ: ಸಹೋದರರ ವಿವಾಹ ಸಂಬಂಧೀ ಶುಭ ಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಬೇಕಾದರೆ ತೀವ್ರ ಪ್ರಯತ್ನ ಅಗತ್ಯ. ದೂರ ಸಂಚಾರದಲ್ಲಿ ಕಳ್ಳತನ ಭೀತಿಯಿದೆ. ಎಚ್ಚರವಾಗಿರಿ.
 
ತುಲಾ: ಆರೋಗ್ಯ ಕೈಕೊಡುವುದು. ಇದರಿಂದ ಇಂದು ನೀವು ಅಂದುಕೊಂಡಿದ್ದ ವ್ಯವಹಾರಗಳಿಗೆ ತೊಡಕಾಗುವುದು. ಹಿರಿಯರೊಂದಿಗೆ ವಾಗ್ವಾದಕ್ಕಿಳಿಯದಿರಿ. ನಿಮ್ಮ ಕೆಲವೊಂದು ಸ್ವಭಾವದಿಂದ ಪ್ರೀತಿ ಪಾತ್ರರಿಗೆ ನೋವುಂಟುಮಾಡುವಿರಿ. ತಾಳ್ಮೆಯಿಂದಿರಿ.
 
ವೃಶ್ಚಿಕ: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಅವಿವಾಹಿತರಿಗೆ ಮನಸ್ಸಿಗೆ ಹಿಡಿಸಿದ ಸಂಬಂಧ ಕೂಡಿಬರುವುದು. ಆದರೆ ಪ್ರೇಮಿಗಳಿಗೆ ಹಿರಿಯರಿಂದ ವಿರೋಧ ವ್ಯಕ್ತವಾಗಲಿದೆ. ವಿದ್ಯಾರ್ಥಿಗಳಿಗೆ ತೀವ್ರ ಪ್ರಯತ್ನ ಬಲ ಅಗತ್ಯ.
 
ಧನು: ಮಕ್ಕಳ ಆರೋಗ್ಯದ ಬಗ್ಗೆ ಚಿಂತೆಯಾಗುವುದು. ನಿಮ್ಮ ಸ್ವಯಂಕೃತ ಅಪರಾಧಗಳ ಬಗ್ಗೆ ಕೊರಗುತ್ತಾ ಕೂರುವಿರಿ. ನಿಮ್ಮ ಮಾತಿನ ಮೇಲೆ ಕಡಿವಾಣ ನಿಮಗಿಲ್ಲದೇ ಹೋದರೆ ಸಂಗಾತಿ ಜತೆಗೂ ಮನಸ್ತಾಪವಾಗುವುದು. ಆದರೆ ಆರ್ಥಿಕ ಲಾಭಕ್ಕೆ ಕೊರತೆಯಿರದು.
 
ಮಕರ: ಎಷ್ಟೋ ದಿನದಿಂದ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆ ದೂರವಾಗಿ ನೆಮ್ಮದಿ ಕಾಣುವಿರಿ. ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಿ ಮನೆಯಲ್ಲಿ ಸಂತಸದ ವಾತಾವರಣವಿರುವುದು. ಸಾಲಗಾರರಿಂದ ಮುಕ್ತಿ ಸಿಗಲಿದೆ.
 
ಕುಂಭ: ಬಾಕಿ ಹಣ ಸಂದಾಯವಾಗಿ ಆರ್ಥಿಕವಾಗಿ ಲಾಭ ಗಳಿಸುವಿರಿ. ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಆದರೆ ಚಾಲನೆ ವೃತ್ತಿಯಲ್ಲಿರುವವರಿಗೆ ಅಪಘಾತದ ಭಯವಿದೆ. ಹೆಚ್ಚಿನ ನೆಮ್ಮದಿಗೆ ಕುಲದೇವರ ಆರಾಧನೆ ಮಾಡಿ.
 
ಮೀನ: ಬಾಕಿ ಇರುವ ಹರಕೆ ಸಂದಾಯ ಮಾಡುವಿರಿ. ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಘಟನೆ ನಡೆಯಲಿದೆ. ಇದರಿಂದ ಮಾನಸಿಕವಾಗಿ ಬೇಸರದಲ್ಲಿರುವಿರಿ. ಆದರೆ ಮಕ್ಕಳಿಂದ ಶುಭ ವಾರ್ತೆ ಸಿಗುವುದು. ದಿನದಂತ್ಯಕ್ಕೆ ಶುಭ ಸುದ್ದಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :