Widgets Magazine

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು| Krishnaveni K| Last Modified ಭಾನುವಾರ, 7 ಏಪ್ರಿಲ್ 2019 (04:49 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

 
ಮೇಷ: ಹೊಸ ಕೆಲಸಗಳಿಗೆ ಕೈ ಹಾಕಲು ಪ್ರಶಸ್ತ ದಿನ. ಸಂಗಾತಿಯೊಂದಿಗೆ ಕಿರು ಸಂಚಾರ ಸಾಧ್ಯತೆ. ಉದ್ಯೋಗ ಕ್ಷೇತ್ರದಲ್ಲಿ ನಿಲ್ಲದ ಸಮಸ್ಯೆಗಳು. ಆದಾಯಕ್ಕೆ ಕೊರತೆಯಾಗದು. ಹೊಸ ವಸ್ತು ಖರೀದಿ ಬಗ್ಗೆ ಚಿಂತನೆ ನಡೆಸುವಿರಿ.
 
ವೃಷಭ: ಯಾವುದೇ ಕೆಲಸಕ್ಕೆ ಮೊದಲು ವಿಘ್ನೇಶ್ವರನ ಪ್ರಾರ್ಥನೆ ಮಾಡಿ ಮುಂದುವರಿದರೆ ಶುಭವಾಗುವುದು. ಉದ್ಯೋಗಿಗಳಿಗೆ ಬಡ್ತಿ ಮುನ್ನಡೆ ಯೋಗವಿದೆ. ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಸಾಮಾಜಿಕವಾಗು ಉತ್ತಮ ಸ್ಥಾನ ಮಾನ ಸಿಗುವುದು.
 
ಮಿಥುನ: ಮಹಿಳೆಯರಿಂದ ಅಪವಾದಕ್ಕೀಡಾಗಬೇಕಾಗುತ್ತದೆ. ಸಂತಾನಹೀನ ದಂಪತಿಗಳು ದೇವರ ಮೊರೆ ಹೋಗುವರು. ಅನಿರೀಕ್ಷಿತವಾಗಿ ಬರುವ ಅತಿಥಿಯೊಬ್ಬರಿಂದ ನಿಮ್ಮ ಜೀವನದಲ್ಲಿ ತಿರುವು ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.
 
ಕರ್ಕಟಕ: ಮನೆಯಲ್ಲಿ ಹೆಚ್ಚಿನ ಜವಾಬ್ಧಾರಿಗಳನ್ನು ವಹಿಸಿಕೊಳ್ಳಬೇಕಾಗುತ್ತದೆ. ಹೊಸತನದ ಆಲೋಚನೆಗಳೊಂದಿಗೆ ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗುವುದು. ಗಂಡ-ಹೆಂಡಿರ ಜಗಳಲ್ಲಿ ಕೂಸು ಬಡವಾಗುವಂತೆ ನಿಮ್ಮ ಮೇಲಧಿಕಾರಿಗಳ ಗುದ್ದಾಟದಲ್ಲಿ ನಿಮ್ಮ ಕೆಲಸಕ್ಕೆ ಕುತ್ತಾಗುವ ಸಾಧ‍್ಯತೆಯಿದೆ.
 
ಸಿಂಹ: ತಾಳ್ಮೆಯಿಂದ ಮುಂದುವರಿಯುವುದು ಅಗತ್ಯ. ದುಡುಕಿನ ಮಾತು ಆಡಬೇಡಿ, ಚಾಡಿ ಮಾತುಗಳಿಗೆ ಕಿವಿಗೊಡಬೇಡಿ. ಆರ್ಥಿಕವಾಗಿ ನಾನಾ ಮೂಲಗಳಿಂದ ಧನಾಗಮನವಾಗಲಿದ್ದು, ಸುಧಾರಣೆ ಕಾಣುವಿರಿ.
 
ಕನ್ಯಾ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ಅವಿವಾಹಿತರಿಗೆ ಯೋಗ್ಯ ವಿವಾಹ ಪ್ರಸ್ತಾಪಗಳು ಬರಲಿವೆ. ವಾಸ ಸ್ಥಳ ಬದಲಾವಣೆ ಬಗ್ಗೆ ಚಿಂತನೆ ಮಾಡುವಿರಿ.
 
ತುಲಾ: ಮನೆಯಲ್ಲಿ ಹಿರಿಯರಿದ್ದರೆ ಅವರ ಮಾತುಗಳಿಗೆ ಮನ್ನಣೆ ನೀಡಿ. ದಾಯಾದಿಗಳು ನಿಮ್ಮ ಏಳಿಗೆ ಬಗ್ಗೆ ಅಸೂಯೆ ಪಡುವರು. ಆರೋಗ್ಯದಲ್ಲಿ ಕಾಳಜಿ ಅಗತ್ಯ. ಹೊಸ ವ್ಯಾಪಾರ, ವಹಿವಾಟಿನಲ್ಲಿ ತೊಡಗಿದರೆ ಲಾಭ ಗಳಿಸುವಿರಿ.
 
ವೃಶ್ಚಿಕ: ಯಾವುದೋ ಬೇಡದ ಚಿಂತೆಗಳಿಂದ ಕೆಲಸದಲ್ಲಿ ನಿರಾಸಕ್ತಿ ತೋರಿಸುವಿರಿ. ಹೊಸ ಕೆಲಸಗಳಿಗೆ ಆರ್ಥಿಕ ಮುಗ್ಗಟ್ಟುಗಳು ಎದುರಾಗಲಿವೆ. ಪಾಲು ವ್ಯವಹಾರ ಮಾಡುವವರು ನಷ್ಟ ಅನುಭವಿಸಬೇಕಾದೀತು. ಎಚ್ಚರಿಕೆಯಿಂದಿರಿ.
 
ಧನು: ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರವಾಗಿರಿ. ಮನೆಯಲ್ಲಿ ಕಳ್ಳತನದ ಭೀತಿಯಿದೆ. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗಿ ಬರಬಹುದು. ಆಸ್ತಿ ವಿವಾದಗಳನ್ನು ಪರಿಹರಿಸಲು ಕೋರ್ಟು ಮೆಟ್ಟಿಲೇರಬೇಕಾಗುತ್ತದೆ.
 
ಮಕರ: ಸಾಲಗಾರರ ಕಾಟ ತಪ್ಪಲಿದೆ. ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ಆದರೆ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು. ಹೊಸ ಕೆಲಸಗಳಿಗೆ ಪ್ರಯತ್ನಿಸುವಿರಿ. ಆದರೆ ಆರಂಭದಲ್ಲಿ ಸಿಕ್ಕ ಸೋಲುಗಳಿಂದ ಹಿಂಜರಿಯುವುದು ಬೇಡ. ಮುಂದೆ ಒಳ್ಳೆಯ ದಿನಗಳಿವೆ.
 
ಕುಂಭ: ಆರ್ಥಿಕವಾಗಿ ಸಾಕಷ್ಟು ಆದಾಯ ಗಳಿಸುತ್ತೀರಿ. ವಾಹನ, ಆಸ್ತಿ, ಚಿನ್ನಾಭರಣ ಖರೀದಿಗೆ ಮನಸ್ಸು ಮಾಡುವಿರಿ. ಚಾಲನಾ ವೃತ್ತಿಯಲ್ಲಿರುವವರು ಎಚ್ಚರಿಕೆಯಿಂದಿರಿ. ಆರೋಗ್ಯ ಹದಗೆಡುವ ಸಾಧ್ಯತೆಯಿದೆ. ಉಳಿದಂತೆ ಸಾಂಸಾರಿಕವಾಗಿ ನೆಮ್ಮದಿಯ ದಿನ.
 
ಮೀನ: ಇಷ್ಟಮಿತ್ರರೊಂದಿಗೆ ಪ್ರವಾಸ, ಭೋಜನ ಇತ್ಯಾದಿ ಸಂತೋಷದ ಕ್ಷಣ ಕಳೆಯುವಿರಿ. ಧಾರ್ಮಿಕ ಕಾರ್ಯಗಳಿಗಾಗಿ ಧನ ವಿನಿಯೋಗವಾಗಲಿದೆ. ಅವಿವಾಹಿತರು ಸ್ವಲ್ಪ ದಿನ ಕಾಯುವುದು ಒಳ್ಳೆಯದು. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶ ಕಳೆದುಕೊಳ್ಳಬೇಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :