ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು, ಸೋಮವಾರ, 15 ಏಪ್ರಿಲ್ 2019 (06:53 IST)

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


 
ಮೇಷ: ಭೂ ಸಂಬಂಧ ವ್ಯವಹಾರ ನಡೆಸುವಿರಿ. ಆದರೆ ವಂಚನೆಗೊಳಗಾದಂತೆ ಎಚ್ಚರಿಕೆ ವಹಿಸಬೇಕು. ಹಿರಿಯರಿಗೆ ಪ್ರವಾಸಗಳಿಂದ ಸಂತಸವಾಗುವುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ವಿಘ್ನಗಳು ಎದುರಾದೀತು.
 
ವೃಷಭ: ವಾಹನ, ಹೊಸ ವಸ್ತು ಖರೀದಿಗೆ ಧನವ್ಯಯವಾಗುವುದು. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಕೆಲಸಗಳಿಗೆ ಮನ್ನಣೆ ಸಿಗುವುದು. ಆದರೆ ಕುಟುಂಬದಲ್ಲಿ ಸಂಗಾತಿಯೊಂದಿಗೆ ಸಾಮರಸ್ಯದ ಕೊರತೆ ಎದುರಾಗುವುದು. ದಿನದಂತ್ಯಕ್ಕೆ ಶುಭ ಸುದ್ದಿ.
 
ಮಿಥುನ: ಅತಿಯಾದ ಒಳ್ಳೆಯತನವೂ ಒಳ್ಳೆಯದಲ್ಲ. ಸಾಲ ಕೇಳಿಕೊಂಡು ಬರುವವರಿಗೆ ಇಂದು ಸಾಲ ಕೊಡಲು ಹೋದರೆ ಮರಳಿ ಬಾರದು. ವ್ಯಾಪಾರಿ ವರ್ಗದವರು ನಷ್ಟ ಅನುಭವಿಸಬೇಕಾಗಬಹುದು. ದೇವತಾ ಪ್ರಾರ್ಥನೆ ಮಾಡಿ.
 
ಕರ್ಕಟಕ: ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ. ದೂರ ಪ್ರಯಾಣ ಮಾಡಬೇಕಾಗಬಹುದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಆರ್ಥಿಕವಾಗಿ ಧನಾಗಮನವಾಗಿ ಸಂತಸವಾಗುವುದು.
 
ಸಿಂಹ: ವ್ಯವಹಾರದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಕಷ್ಟ ಬಂದಾಗ ಜಾಣ್ಮೆಯಿಂದ ನಿಭಾಯಿಸಿದರೆ ಪರಿಹಾರ ಸಿಗುವುದು. ನೆರೆಹೊರೆಯವರೊಂದಿಗೆ ವಾಗ್ವಾದಕ್ಕಿಳಿಯಬೇಡಿ. ದೈಹಿಕ ಆರೋಗ್ಯ ಹದಗೆಡಬಹುದು.
 
ಕನ್ಯಾ: ವಿದ್ಯಾರ್ಥಿಗಳು ನಿರೀಕ್ಷಿತ ಫಲಿತಾಂಶ ಸಿಗದೇ ನಿರಾಶೆ ಅನುಭವಿಸುವರು. ಕುಟುಂಬದಲ್ಲಿ ನಿಮ್ಮ ಅಭಿಪ್ರಾಯಗಳಿಗೆ ಬೆಲೆ ಸಿಗದೇ ಬೇಸರವಾಗಬಹುದು. ನೂತನ ವ್ಯವಹಾರ ಮಾಡುವುದಿದ್ದರೆ ಸ್ವಲ್ಪ ದಿನ ಕಾಯುವುದು ಒಳ್ಳೆಯದು.
 
ತುಲಾ: ಉದರ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ನೆರೆಹೊರೆಯವರೊಂದಿಗೆ ನೀರಿನ ವಿಚಾರಕ್ಕೆ ಮನಸ್ತಾಪ ಮಾಡಿಕೊಳ್ಳುತ್ತೀರಿ. ತಾತ್ಕಾಲಿಕ ಉದ್ಯೋಗಿಗಳಿಗೆ ಸ್ಥಿರ ಉದ್ಯೋಗ ಲಭಿಸುತ್ತದೆ.
 
ವೃಶ್ಚಿಕ: ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರುವುದು. ಆದರೆ ಪ್ರೇಮಿಗಳು ಮನೆಯವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ.
 
ಧನು: ವಿವಾಹಾಪೇಕ್ಷಿಗಳು, ಪ್ರೇಮಿಗಳು ಇಂದು ಸಿಹಿ ಸುದ್ದಿ ನಿರೀಕ್ಷಿಸಬಹುದು.ವ್ಯಾಪಾರ, ವ್ಯವಹಾರಗಳಲ್ಲಿ ಚೇತರಿಕೆ ಕಂಡುಬರುವುದು. ಸಂಗಾತಿಯ ಅಲಂಕಾರಿಕ ವಸ್ತುಗಳಿಗೆ ಖರ್ಚು ವೆಚ್ಚಗಳಾಗಲಿವೆ. ರಾಜಕೀಯದಲ್ಲಿ ಮುನ್ನಡೆ.
 
ಮಕರ: ಉದ್ಯೋಗದಲ್ಲಿ ಸ್ಥಾನಪಲ್ಲಟ, ಬಡ್ತಿ ಯೋಗವಿದೆ. ವಾಸ ಸ್ಥಳ ಬದಲಾವಣೆಗೆ ಚಿಂತನೆ ನಡೆಸುವಿರಿ. ವ್ಯಾಪಾರ, ವ್ಯವಹಾರಗಳಿಗೆ ಕೈ ಹಾಕಿದರೆ ಅಧಿಕ ಲಾಭ ಗಳಿಸುವಿರಿ. ಕುಲದೇವರ ಪ್ರಾರ್ಥನೆಯಿಂದ ಹೆಚ್ಚಿನ ಶುಭ ಫಲ ಸಿಗುವುದು.
 
ಕುಂಭ: ಇತರರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ನಿರುದ್ಯೋಗಿಗಳಿಗೆ ಬಂದ ಅವಕಾಶಗಳು ಕೈ ತಪ್ಪಿ ಬೇಸರವಾಗುವುದು. ಯಾವುದೇ ಕೆಲಸದಲ್ಲೂ ಸತತ ಪ್ರಯತ್ನ ಅಗತ್ಯ. ಮಿತ್ರರ ಸಹಕಾರ ದೊರೆಯಲಿದೆ.
 
ಮೀನ: ಕುಟುಂಬದ ಕೆಲವೊಂದು ಜವಾಬ್ಧಾರಿಗಳು ಹೆಗಲಿಗೇರಲಿವೆ. ಸಹೋದರರ ವಿವಾಹ ಸಂಬಂಧ ಓಡಾಟ ನಡೆಸಬೇಕಾಗುತ್ತದೆ. ಆದರೆ ಆರೋಗ್ಯವೂ ಕೈ ಕೊಡುವುದು. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚು ವೆಚ್ಚಗಳೂ ತಲೆದೋರಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಮಕ್ಕಳಿಗೆ ಈ ಸಮಸ್ಯೆಗೆ ಸುಬ್ರಹ್ಮಣ್ಯ ಸ್ವಾಮಿಯನ್ನು ಈ ರೀತಿ ಪೂಜೆ ಮಾಡಬೇಕು

ಬೆಂಗಳೂರು: ಮಕ್ಕಳು ಹಠ ಮಾಡುವುದು ಸಾಮಾನ್ಯ. ಆದರೆ ನಿಯಂತ್ರಿಸಲಾಗದಷ್ಟು ಹಠಮಾರಿಗಳಾದರೆ ಅದಕ್ಕೆ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಕುಜ ಗ್ರಹದ ಪ್ರಭಾವ ಕಡಿಮೆಯಾಗಲು ಏನು ಮಾಡಬೇಕು?

ಬೆಂಗಳೂರು: ಜೀವನ ಶೈಲಿ ಸರಿಪಡಿಸಿಕೊಂಡರೆ ನವಗ್ರಹಗಳ ಪ್ರಭಾವ ಶಮನವಾಗುತ್ತದೆಯೇ? ಹೌದು. ಆರೋಗ್ಯಕರ ಜೀವನ ...

news

ದಿನಕ್ಕೊಂದು ದಾನ: ಕಾಡಿಗೆ ಮತ್ತು ಉದ್ದಿನ ಬೇಳೆ ದಾನ ಮಾಡಿದರೆ ಏನು ಫಲ?

ಬೆಂಗಳೂರು: ದಾನ ಮಾಡುವುದು ಶ್ರೇಷ್ಠ ವಿಚಾರ ಎಂದು ನಮಗೆಲ್ಲಾ ಗೊತ್ತಿದೆ. ಆದರೆ ಯಾವ ದಾನ ಮಾಡಿದರೆ ಏನು ಫಲ ...