ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು, ಭಾನುವಾರ, 28 ಏಪ್ರಿಲ್ 2019 (08:55 IST)

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


 
ಮೇಷ: ಸಮಾಧಾನ, ಶಾಂತಿಯುತ ಮಾತುಕತೆಯಿಂದ ಎಂತಹದ್ದೇ ಸಮಸ್ಯೆ ಬಂದರೂ ಪರಿಹರಿಸಬಹುದು ಎಂಬುದನ್ನು ಮನಗಾಣಿರಿ. ಸಂಗಾತಿಯಿಂದ ಮನಸ್ಸಿಗೆ ಬೇಸರವಾಗುವಂತಹ ಘಟನೆಗಳು ನಡೆಯಲಿವೆ. ತಾಳ್ಮೆಯೇ ಎಲ್ಲದಕ್ಕೂ ಮುಖ್ಯ.
 
ವೃಷಭ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನಗಳು ಹೆಚ್ಚುವುದು. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿ ಸಂತಸವಾಗುವುದು. ಆರ್ಥಿಕವಾಗಿ ಚೇತರಿಕೆ ಕಾಣುವಿರಿ. ಅರ್ಧಕ್ಕೆ ನಿಂತ ನಿಮ್ಮ ಯೋಜನೆಗಳು ಪುನರಾರಂಭವಾಗಲಿದೆ.
 
ಮಿಥುನ: ಯಾಕೋ ಇಂದು ನಿಮ್ಮ ಗ್ರಹಚಾರ ಕೆಟ್ಟಿದೆ ಎನಿಸಬಹುದು. ಕೈಗೊಂಡ ಕೆಲಸಗಳಿಗೆ ವಿಘ್ನಗಳು ಎದುರಾಗಬಹುದು. ಸಂಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಪಡೆಯುವಿರಿ. ನೆಮ್ಮದಿಗಾಗಿ ದೇವರ ಪ್ರಾರ್ಥನೆ ಮಾಡಿ.
 
ಕರ್ಕಟಕ: ಮಕ್ಕಳ ವಿದ್ಯಾಭ್ಯಾಸ, ಭವಿಷ್ಯದಲ್ಲಿ ಏಳಿಗೆ ಕಾಣುವಿರಿ. ಆರ್ಥಿಕವಾಗಿ ಚೇತರಿಕೆ ಕಂಡುಬರುವುದು. ಅವಿವಾಹಿತರಿಗೆ ಕಂಕಣ ಬಲ ಸದ್ಯದಲ್ಲೇ ಕೂಡಿಬರಲಿದೆ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಪಡೆಯುವರು.
 
ಸಿಂಹ: ಕೌಟುಂಬಿಕ ಜವಾಬ್ಧಾರಿಗಳು ಹೆಚ್ಚಲಿವೆ. ಆದರೆ ನಿಮ್ಮ ಜವಾಬ್ಧಾರಿಯುತ ನಡುವಳಿಕೆಯಿಂದ ಪ್ರಶಂಸೆಗೊಳಗಾಗುವಿರಿ. ಆದಾಯಕ್ಕೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ.
 
ಕನ್ಯಾ: ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಸಾಧ್ಯತೆಯಿದೆ. ಹಿತ ಶತ್ರುಗಳು ವಂಚಿಸಲು ಹೊಂಚು ಹಾಕಿರುತ್ತಾರೆ. ಎಚ್ಚರಿಕೆ ಅಗತ್ಯ. ಕಾಗದ, ಪತ್ರ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ. ಮಿತ್ರರ ಬೆಂಬಲ ಸಿಗುವುದು.
 
ತುಲಾ: ವಿನಾಕಾರಣ ಅಪವಾದಕ್ಕೆ ಗುರಿಯಾಗುವಿರಿ. ಕೈಗೊಂಡ ಕಾರ್ಯಗಳಲ್ಲಿ ಸೋಲಾಗುವುದು. ಎಚ್ಚರಿಕೆಯಿಂದ ಹೆಜ್ಜೆಯಿಟ್ಟರೆ ಯಶಸ್ಸು ನಿಮ್ಮದಾಗಲಿದೆ. ವ್ಯಾಪಾರದಲ್ಲಿ ಕೊಂಚ ನಷ್ಟವಾದದರೂ ತಾಳ್ಮೆ ಕಳೆದುಕೊಳ್ಳಬೇಡಿ.
 
ವೃಶ್ಚಿಕ: ಕಾರ್ಯದಲ್ಲಿ ವಿಘ್ನಗಳು ಉಂಟಾದಾಗ ಭಯಪಡಬೇಡಿ. ಕೌಟುಂಬಿಕವಾಗಿ ಸಂಗಾತಿಯಿಂದ ಸೂಕ್ತ ಸಲಹೆಗಳು ಸಿಗುವುದು. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳೊಂದಿಗೆ ವರ್ತಿಸುವಾಗ ಎಚ್ಚರಿಕೆಯಿರಲಿ.
 
ಧನು: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಬಹುದು. ಸನ್ಮಿತ್ರರ ಸಹಕಾರದಿಂದ ಬೆಟ್ಟದಂತೆ ಬಂದ ಕಷ್ಟಗಳು ದೂರವಾಗುವುದು. ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ಎಚ್ಚರಿಕೆ ಅಗತ್ಯ.
 
ಮಕರ: ನಿರುದ್ಯೋಗಿಗಳು ಕೊಂಚ ನಿರಾಶೆ ಅನುಭವಿಸುವರು. ಪ್ರೇಮಿಗಳಿಗೆ ಶುಭ ದಿನ. ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯ. ಆದರೆ ಕೌಟುಂಬಿಕವಾಗಿ ನೀವು ಕೈಗೊಳ್ಳುವ ನಿರ್ಧಾರಗಳು ಹಿರಿಯರ ಬೇಸರಕ್ಕೆ ಕಾರಣವಾಗಬಹುದು.
 
ಕುಂಭ: ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ಹೆಚ್ಚುವುದು. ಲೆಕ್ಕ ಪತ್ರಗಳನ್ನು ಸರಿಯಾಗಿಟ್ಟುಕೊಳ್ಳದಿದ್ದರೆ ಮುಂದೆ ಅಪಾಯ ತಪ್ಪದು. ಕನಸು ನನಸು ಮಾಡಿಕೊಳ್ಳಲು ಸತತ ಪ್ರಯತ್ನ ಅಗತ್ಯ.
 
ಮೀನ: ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ಕಾಣುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಆದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಕಂಡುಬರಬಹುದು. ಆದಾಯಕ್ಕೆ ಕೊರತೆಯಿರದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಗೃಹಿಣಿಯರು ಪಾಕೆಟ್ ಮನಿ ಮಾಡಿಕೊಳ್ಳಲು ಇಲ್ಲಿದೆ ಟಿಪ್ಸ್!

ಬೆಂಗಳೂರು: ಉದ್ಯೋಗಕ್ಕೆ ಹೋಗದ ಗೃಹಿಣಿಯರಿಗೆ ಕೈಯಲ್ಲಿ ಕಾಸು ಕೂಡಿಡುವ ಚಿಂತೆ ಇದ್ದೇ ಇರುತ್ತದೆ. ಗಂಡ ...

news

ದೀಪದ ಬತ್ತಿಯಿಂದ ಯಾವ ರಾಶಿಯವರಿಗೆ ಯಾವ ದೋಷ ನಿವಾರಣೆಯಾಗುತ್ತದೆ?

ಬೆಂಗಳೂರು: ದೀಪ ಎನ್ನುವುದು ಜೀವನದಲ್ಲಿ ಕತ್ತಲೆಯನ್ನು ನಾಶ ಮಾಡಿ ಬೆಳಕು ಒದಗಿಸುವುದು. ದೇವರಿಗೆ ದೀಪ ...

news

ಬುಧ ಗ್ರಹದ ಪ್ರಭಾವ ಹೆಚ್ಚಿದ್ದರೆ ಯಾವ ಪೂಜೆ ಮಾಡಬೇಕು?

ಬೆಂಗಳೂರು: ಹೆಚ್ಚಿನವರು ಕುಜ ಮತ್ತ ಬುಧ ದೋಷದಿಂದ ನಾನಾ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಿದ್ದರೆ ಈ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.