ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು, ಶುಕ್ರವಾರ, 10 ಮೇ 2019 (06:58 IST)

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


 
ಮೇಷ: ಕೌಟುಂಬಿಕ ಜವಾಬ್ಧಾರಿಗಳು ಹೆಚ್ಚಲಿವೆ. ಹಾಗಿದ್ದರೂ ನಿಮ್ಮ ಕೆಲಸಕ್ಕೆ ತಕ್ಕ ಮನ್ನಣೆ ಸಿಗದೇ ಬೇಸರಗೊಳ್ಳುವಿರಿ. ಕಷ್ಟದ ಸಮಯದಲ್ಲಿ ಬಂಧು ಮಿತ್ರರ ನೆರವು ಸಿಗಲಿದೆ. ಆರ್ಥಿಕವಾಗಿ ಸಮಾಧಾನಕರ ದಿನ.
 
ವೃಷಭ: ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ. ವಾಹನ ಬದಲಾವಣೆಗೆ ಚಿಂತನೆ ಮಾಡುವಿರಿ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರುವುದು. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ.
 
ಮಿಥುನ: ಮಾನಸಿಕವಾಗಿ ಋಣಾತ್ಮಕ ಚಿಂತನೆಗಳು ಹೆಚ್ಚಿ ಕೆಲಸದಲ್ಲಿ ಶ್ರದ್ಧೆಯ ಕೊರತೆ ಕಂಡುಬರುವುದು. ವಿವಾಹಾಪೇಕ್ಷಿಗಳಿಗೆ ಮನಸ್ಸಿಗೆ ಹಿಡಿಸಿದ ವಧು ಅಥವಾ ವರ ಸಿಗಲಿದ್ದಾರೆ. ಹೆಚ್ಚಿನ ಶುಭ ಫಲಗಳಿಗೆ ದೇವತಾ ಪ್ರಾರ್ಥನೆ ಮಾಡಿ.
 
ಕರ್ಕಟಕ: ಸಹೋದರರೊಂದಿಗೆ ಆಸ್ತಿ ವಿಚಾರಕ್ಕೆ ಕಿರಿ ಕಿರಿಯಾಗಬಹುದು. ಮನೆ ಬದಲಾವಣೆಗೆ ಚಿಂತನೆ ಮಾಡುವಿರಿ. ಹಿರಿಯರ ಅಭಿಪ್ರಾಯಗಳಿಗೆ ಕಿವಿಗೊಡಿ. ಉದ್ಯೋಗ ಬದಲಾವಣೆಗೆ ಚಿಂತನೆ ಮಾಡುವಿರಿ.
 
ಸಿಂಹ: ಸಾಮಾಜಿಕವಾಗಿ ನಿಮ್ಮ ಕೆಲಸಗಳಿಗೆ ಮನ್ನಣೆ ಸಿಕ್ಕಿ ರಾಜನಂತೆ ಮೆರೆಯುವ ದಿನವಿದು. ಆದರೆ ಮಾತಿನ ಮೇಲೆ ನಿಗಾ ಇರಲಿ. ಆರೋಗ್ಯ ಸುಧಾರಿಸುವುದು. ಆರ್ಥಿಕವಾಗಿ ಧನಲಾಭವಾಗಲಿದೆ. ಆದರೆ ಖರ್ಚಿನ ಬಗ್ಗೆ ಲೆಕ್ಕ ಇರಲಿ.
 
ಕನ್ಯಾ: ಸಂಧು ನೋವು, ಮೈ ಕೈ ನೋವು ಇತ್ಯಾದಿ ಆರೋಗ್ಯ ಸಮಸ್ಯೆಗಳು ಬರುವುದು. ಧನ್ವಂತರಿ ಮಂತ್ರ ಜಪಿಸಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಜವಾಬ್ಧಾರಿ ಹೆಚ್ಚುವುದು. ಹೊಸ ಪ್ರಯತ್ನಕ್ಕೆ ಕೈ ಹಾಕುವಿರಿ.
 
ತುಲಾ: ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಅನಿರೀಕ್ಷಿತವಾಗಿ ಬರುವ ಕೆಲವೊಂದು ಖರ್ಚಿನಿಂದ ಸಾಲ ಮಾಡಬೇಕಾಗಿ ಬರುವ ಸಾಧ್ಯತೆಯಿದೆ. ಸಂಗಾತಿಯ ಅಭಿಪ್ರಾಯಗಳಿಗೆ ಕಿವಿಗೊಡಿ.
 
ವೃಶ್ಚಿಕ: ಮಕ್ಕಳಿಂದ ಶುಭ ಸುದ್ದಿ, ಶುಭ ಫಲ ಪಡೆಯುವಿರಿ. ಈ ದಿನ ಸಾಲ ಕೊಡಲು ಹೋದರೆ ಮರಳಿ ಬಾರದು. ಮನೆಯ ಸಮಸ್ಯೆಗಳಿಗೆ ತಾಳ್ಮೆಯಿಂದ ಪರಿಹಾರ ಕಂಡುಕೊಳ್ಳಿ. ದೂರ ಸಂಚಾರ ಸಾಧ್ಯತೆಯಿದೆ.
 
ಧನು: ಮಕ್ಕಳಿಗೆ ಹೊಸ ಬಟ್ಟೆ ಖರೀದಿ ಮಾಡುವಿರಿ. ವಿದ್ಯಾರ್ಥಿಗಳು ನಿರೀಕ್ಷೆಗೆ ತಕ್ಕ ಫಲ ಪಡೆಯುವರು. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡುವಿರಿ. ಮಾಡುವ ಕೆಲಸಗಳಿಗೆ ವಿಘ್ನಗಳು ಎದುರಾದರೂ ಧೃತಿಗೆಡದೇ ಮುಂದುವರಿಯಿರಿ.
 
ಮಕರ: ಬ್ಯಾಂಕ್ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಿ. ಸಾಲಬಾಧೆಯಿಂದ ಮುಕ್ತರಾಗುವಿರಿ. ಆದರೆ ಕೌಟುಂಬಿಕವಾಗಿ ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳುವಿರಿ.
 
ಕುಂಭ: ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ. ಮನೆಯ ಕೆಲಸಗಳಿಗೆ ಓಡಾಟ ನಡೆಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಅಮೂಲ್ಯ ಸಮಯ ಕಳೆಯುವಿರಿ.
 
ಮೀನ: ವ್ಯಾಪಾರ ಕ್ಷೇತ್ರದಲ್ಲಿ ನಿವ್ವಳ ಲಾಭ ಗಳಿಸುವಿರಿ. ಕೃಷಿ ಕ್ಷೇತ್ರದವರು ನೀರಿಗಾಗಿ ಪರದಾಟ ನಡೆಸಬೇಕಾಗುತ್ತದೆ. ನೌಕರ ವರ್ಗದವರಿಗೆ ಬಡ್ತಿ ಯೋಗ. ಮಹಿಳೆಯರಿಂದ ಶುಭ ಫಲ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಯಾವ ರಾಶಿಗೆ ಯಾವ ರಾಶಿಯವರೊಡನೆ ಸ್ನೇಹ ಮೂಡುತ್ತದೆ?

ಬೆಂಗಳೂರು: ಕೆಲವೊಂದು ರಾಶಿಯವರ ಸ್ವಭಾವಗಳು ಬೇರೆ ಬೇರೆಯಾಗಿರುತ್ತದೆ. ಹಾಗೇ ಕೆಲವೊಂದು ರಾಶಿಯವರು ಪರಸ್ಪರ ...

news

ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಬೇಕಾದರೆ ಈ ಮಂತ್ರ ಪಠಿಸಬೇಕು

ಬೆಂಗಳೂರು: ಹಲವು ಪೋಷಕರು ತಮ್ಮ ಮಕ್ಕಳಿಗೆ ವಿದ್ಯೆ ತಲೆಗೆ ಹತ್ತುತ್ತಿಲ್ಲ, ನಿರೀಕ್ಷಿಸಿದಷ್ಟು ಅಂಕ ಬರಲ್ಲ ...

news

ಯಾವ ರಾಶಿಗೆ ಯಾವ ರಾಶಿಯವರೊಡನೆ ಸ್ನೇಹ ಮೂಡುತ್ತದೆ?

ಬೆಂಗಳೂರು: ಕೆಲವೊಂದು ರಾಶಿಯವರ ಸ್ವಭಾವಗಳು ಬೇರೆ ಬೇರೆಯಾಗಿರುತ್ತದೆ. ಹಾಗೇ ಕೆಲವೊಂದು ರಾಶಿಯವರು ಪರಸ್ಪರ ...

news

ಮುಸ್ಸಂಜೆಯಲ್ಲಿ ದೀಪ ಹಚ್ಚುವುದರ ಶಾಸ್ತ್ರದ ಮಹತ್ವ

ಬೆಂಗಳೂರು: ಪ್ರತೀ ಮನೆಯಲ್ಲಿ ಮುಸ್ಸಂಜೆ ವೇಳೆ ದೀಪ ಹಚ್ಚಿ, ದೇವರ ಪ್ರಾರ್ಥನೆ ಮಾಡುವುದರ ರೂಡಿಯಿರುತ್ತದೆ. ...