ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು, ಸೋಮವಾರ, 10 ಜೂನ್ 2019 (08:42 IST)

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


 
ಮೇಷ: ಮನಸ್ಸಿನ ನೆಮ್ಮದಿಗಾಗಿ ಕಿರು ಸಂಚಾರ ಮಾಡುವಿರಿ. ಸಂಗಾತಿ ಜತೆಗೆ ಮನಸ್ತಾಪವಾಗದಂತೆ ನೋಡಿಕೊಳ್ಳಿ. ಈ ಸಮಯದಲ್ಲಿ ನಿಮ್ಮ ಸಾಂತ್ವನ ಸಂಗಾತಿಗೆ ಅಗತ್ಯವಿರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
 
ವೃಷಭ: ಇಷ್ಟಮಿತ್ರರೊಂದಿಗೆ ಭೋಜನ, ಪ್ರವಾಸ ಕೈಗೊಳ್ಳುವಿರಿ. ಆದರೆ ಖರ್ಚು ವೆಚ್ಚಗಳ ಬಗ್ಗೆ ಜಾಗ್ರತೆ ಅಗತ್ಯ. ಎದುರಾಗಲಿರುವ ಆಪತ್ತು ಎದುರಿಸಲು ಇಂದೇ ಸಜ್ಜಾಗಿ. ವಾಹನಾದಿ ಖರೀದಿಗಳ ಯೋಗವಿದೆ.
 
ಮಿಥುನ: ದೈವಾನುಕೂಲದಿಂದ ನೀವು ಇಂದು ಕೈ ಹಿಡಿದ ಕೆಲಸಗಳು ಪೂರ್ತಿಯಾಗುವುದು. ಸಂಗಾತಿಯ ಸಲಹೆಗಳಿಗೆ ಕಿವಿಗೊಡಿ. ವಾಸ ಸ್ಥಳ ಬದಲಾವಣೆಗೆ ಚಿಂತನೆ ನಡೆಸುವಿರಿ. ಆದರೆ ಅಪರಿಚಿತರೊಡನೆ ವ್ಯವಹಾರ ಬೇಡ.
 
ಕರ್ಕಟಕ: ಕುಲದೇವರ ಪ್ರಾರ್ಥನೆ, ಹರಕೆ ಬಾಕಿಯಿದ್ದರೆ ತೀರಿಸಿ. ಇದರಿಂದ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕ್ಕಿ ಅಭಿವೃದ್ಧಿ ಕಾಣುವಿರಿ. ನೂತನ ದಂಪತಿಗಳು ಪ್ರವಾಸ ತೆರಳುವರು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
 
ಸಿಂಹ: ಸಾಮಾಜಿಕವಾಗಿ ನಿಮ್ಮ ಗೌರವ, ಸ್ಥಾನ ಮಾನಗಳು ಹೆಚ್ಚಲಿವೆ. ಕಷ್ಟದಲ್ಲಿರುವವರಿಗೆ ನೆರವಾಗುವಿರಿ. ಆದರೆ ನೆರೆಹೊರೆಯವರು ನಿಮ್ಮ ಬಗ್ಗೆ ಚಾಡಿ ಮಾತು ಹೇಳುವರು. ತಾಳ್ಮೆಯಿಂದಲೇ ಎದುರಿಸಿ.
 
ಕನ್ಯಾ: ವ್ಯಾಪಾರಿಗಳಿಗೆ ನಷ್ಟವಾಗಬಹುದು. ನಿರುದ್ಯೋಗಿಗಳು ಸ್ವಂತ ಉದ್ದಿಮೆ ನಡೆಸುವುದು ಉತ್ತಮ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕು. ಹೆಚ್ಚಿನ ಧನಲಾಭಕ್ಕಾಗಿ ಲಕ್ಷ್ಮೀ ದೇವಿಯ ಪ್ರಾರ್ಥನೆ ಮಾಡಿ.
 
ತುಲಾ: ಪ್ರೀತಿ ಪಾತ್ರರ ಭೇಟಿಯಾಗುವುದರಿಂದ ಮನಸ್ಸಿಗೆ ನೆಮ್ಮದಿ. ಕುಟುಂಬದಲ್ಲಿ ಸಂತಸದ ವಾತಾವರಣವಿರುವುದು. ವಾಹನ ಚಾಲಕರು ಚಾಲನೆಯಲ್ಲಿ ಎಚ್ಚರಿಕೆಯಿಂದಿರುವುದು ಉತ್ತಮ. ಅಪಘಾತದ ಭೀತಿಯಿದೆ.
 
ವೃಶ್ಚಿಕ: ಇಷ್ಟು ದಿನ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗಲಿದೆ. ವ್ಯಾಪಾರಿಗಳಿಗೆ ತನ್ನ ವೃತ್ತಿಯಲ್ಲಿ ಕೆಲವೊಂದು ಅಡೆತಡೆಗಳು ಎದುರಾಗಬಹುದು. ಚಿನ್ನಾಭರಣ ಖರೀದಿಗೆ ಮುಂದಾಗುವಿರಿ.
 
ಧನು: ಹಿರಿಯರೊಂದಿಗೆ ಮಾತನಾಡುವಾಗ ಮಾತಿನ ಮೇಲೆ ನಿಗಾ ಇರಲಿ. ಗೃಹೋಪಯೋಗಿ ವಸ್ತುಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಆರೋಗ್ಯದ ಮೇಲೆ ಕಾಳಜಿಯಿರಲಿ. ಸಹೋದರರಿಂದ ಸಂತಸದ ವಾರ್ತೆ.
 
ಮಕರ: ಸಾಲಗಾರರು ಹಣ ಮರುಪಾವತಿ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುವುದು. ಬಂಡವಾಳ ಹೂಡಿಕೆಗೆ ಮುಂದಾಗುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.
 
ಕುಂಭ: ಮನೆಯಲ್ಲಿ ಅವಿವಾಹಿತ ಸೋದರಿಯರಿದ್ದರೆ ಅವರ ವಿವಾಹ ಸಂಬಂಧ ಜವಾಬ್ಧಾರಿ ವಹಿಸುವಿರಿ. ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಖರ್ಚು ವೆಚ್ಚಗಳ ಬಗ್ಗೆ ಲೆಕ್ಕವಿಟ್ಟುಕೊಂಡಿರಿ.
 
ಮೀನ: ಹಿರಿಯರೊಂದಿಗೆ ಅಭಿಪ್ರಾಯ ಬೇಧಗಳುಂಟಾಗಬಹುದು. ಪ್ರೇಮಿಗಳ ಕದ್ದು ಮುಚ್ಚಿ ವ್ಯವಹಾರಗಳಿಗೆ ಬ್ರೇಕ್ ಬೀಳಲಿದೆ. ಆದಾಯವಿದ್ದಷ್ಟೇ ಖರ್ಚೂ ಹೆಚ್ಚುವುದು. ಮಹಿಳೆಯರಿಂದ ಶುಭವಾಗಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?

ಬೆಂಗಳೂರು: ಒಟ್ಟು 27 ನಕ್ಷತ್ರಗಳಿದ್ದು, ಪ್ರತಿಯೊಂದು ನಕ್ಷತ್ರಕ್ಕೂ ಪ್ರತ್ಯೇಕ ಗಾಯತ್ರಿ ಮಂತ್ರವಿದೆ. ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ನಕ್ಷತ್ರಗಳಿಗನುಗುಣವಾಗಿ ಯಾವ ಗಾಯತ್ರಿ ಮಂತ್ರ ಜಪಿಸಬೇಕು?

ಬೆಂಗಳೂರು: ಒಟ್ಟು 27 ನಕ್ಷತ್ರಗಳಿದ್ದು, ಪ್ರತಿಯೊಂದು ನಕ್ಷತ್ರಕ್ಕೂ ಪ್ರತ್ಯೇಕ ಗಾಯತ್ರಿ ಮಂತ್ರವಿದೆ. ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.