ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು, ಗುರುವಾರ, 4 ಜುಲೈ 2019 (08:36 IST)

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


 
ಮೇಷ: ಆರೋಗ್ಯದಲ್ಲಿ ನಿಧಾನವಾಗಿ ಸುಧಾರಣೆ ಕಂಡುಬರಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳು ಅಧಿಕವಾಗುವುದು. ಹಿರಿಯರ ಸಲಹೆಗಳು ಪಥ್ಯವಾಗದೇ ಇರಬಹುದು. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗುವುದು.
 
ವೃಷಭ: ವಿವಾಹ ಪ್ರಯತ್ನಕ್ಕೆ ಕೆಲವು ಅಡ್ಡಿ ಆತಂಕಗಳು ಎದುರಾಗಲಿವೆ. ಹಳೆಯ ಪ್ರೇಮಿಯಿಂದ ತೊಂದರೆ ಎದುರಾಗಬಹುದು. ಹಿರಿಯರ ಸಲಹೆಗಳಿಗೆ ಕಿವಿಗೊಡಿ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಪ್ರಶಂಸೆ ಎದುರಾಗುವುದು.
 
ಮಿಥುನ: ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಮಾಡಬೇಕಾಗಿ ಬರಬಹುದು. ಸಂಚಾರದಲ್ಲಿ ಜಾಗ್ರತೆಯಿರಲಿ. ವಾಹನ ಖರೀದಿ ಯೋಗವಿದೆ. ನೆರೆಹೊರೆಯವರೊಂದಿಗೆ ಎಚ್ಚರಿಕೆಯಿಂದ ವರ್ತಿಸಿ. ದೇವತಾ ಆರಾಧನೆ ಮಾಡಿ.
 
ಕರ್ಕಟಕ: ಕೌಟುಂಬಿಕ ನೆಮ್ಮದಿಗೆ ಭಂಗ ತರುವ ಕೆಲವೊಂದು ಘಟನೆಗಳು ಸಂಭವಿಸಲಿವೆ. ಮಕ್ಕಳ ಭವಿಷ್ಯಕ್ಕಾಗಿ ಯೋಜನೆ ರೂಪಿಸುವಿರಿ. ಸ್ವ ಉದ್ಯೋಗಿಗಳಿಗೆ ಲಾಭವಾಗುವುದು. ಕೆಳಹಂತದ ನೌಕರ ವರ್ಗದವರಿಗೆ ಬಡ್ತಿ ಯೋಗವಿದೆ.
 
ಸಿಂಹ: ಸಾಮಾಜಿಕವಾಗಿ ಉತ್ತಮ ಸ್ಥಾನ ಮಾನ, ಗೌರವ ಸಂಪಾದಿಸಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಆದಾಯ ಉತ್ತಮವಾಗುವುದು. ಮನೆ ಬದಲಾವಣೆಗೆ ಚಿಂತನೆ ಮಾಡುವಿರಿ. ಸಂಗಾತಿಯ ಮಾತಿಗೆ ಕಿವಿಗೊಡುವುದು ಉತ್ತಮ.
 
ಕನ್ಯಾ: ಕಷ್ಟದ ಸಮಯದಲ್ಲಿ ಸನ್ಮಿತ್ರರ ಸಹಕಾರ ಸಿಗುವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯವಿದೆ. ಆದಾಯ ದ್ವಿಗುಣವಾಗುವುದು.
 
ತುಲಾ: ಸಾಲ ಪಾವತಿಯ ಚಿಂತೆ ಕಾಡುವುದು. ಉದ್ಯೋಗ ಕ್ಷೇತ್ರದಲ್ಲಿ ಹಿತ ಶತ್ರುಗಳಿಂದ ವಂಚನೆಗೊಳಗಾಗುವಿರಿ. ಋಣಾತ್ಮಕ ಚಿಂತನೆ ಬೇಡ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.
 
ವೃಶ್ಚಿಕ: ಮಹಿಳಾ ಉದ್ಯೋಗಿಗಳಿಗೆ ಶುಭ ಫಲ ಪ್ರಾಪ್ತಿಯಾಗುವುದು. ವಾತ ಸಂಬಂಧೀ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ಎಚ್ಚರಿಕೆ ಅಗತ್ಯ. ಹಿರಿಯರ ಬಗ್ಗೆ ಕಾಳಜಿ ಮಾಡುವಿರಿ. ದೇವತಾ ಪ್ರಾರ್ಥನೆಯಿಂದ ಮತ್ತಷ್ಟು ಶುಭವಾಗುವುದು.
 
ಧನು: ಮಕ್ಕಳಿಂದ ಖುಷಿಕೊಡುವ ವಾರ್ತೆ ಸಿಗುವುದು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ. ಅನಿರೀಕ್ಷಿತವಾಗಿ ಬಂಧು ಮಿತ್ರರ ಭೇಟಿ ಮನಸ್ಸಿಗೆ ಖುಷಿಕೊಡಲಿದೆ.
 
ಮಕರ: ವಿವಾದಗಳಿಂದ ದೂರವಿರುವುದೇ ಒಳ್ಳೆಯದು. ಬಚ್ಚಿಟ್ಟ ರಹಸ್ಯಗಳು ಹೊರಬೀಳಲಿವೆ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು. ಆಸ್ತಿ ವಿವಾದಗಳಲ್ಲಿ ಹಿರಿಯರ ಮಧ್ಯಸ್ಥಿಕೆಗೆ ಮಹತ್ವ ಕೊಡಿ.
 
ಕುಂಭ: ಪ್ರೀತಿ ಪಾತ್ರರ ನೆಮ್ಮದಿಗಾಗಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ಸಾಧು ಸಜ್ಜನರ ಭೇಟಿಯಿಂದ ಮನಸ್ಸಿಗೆ ನೆಮ್ಮದಿಯಾಗುವುದು. ಆರ್ಥಿಕವಾಗಿ ಖರ್ಚುವೆಚ್ಚಗಳಿಗೆ ಕಡಿವಾಣ ಹಾಕಿ. ದೇವತಾ ಪ್ರಾರ್ಥನೆ ಮಾಡಿ.
 
ಮೀನ: ಆರ್ಥಿಕವಾಗಿ ನಿಧಾನವಾಗಿ ಚೇತರಿಕೆ ಕಂಡುಬರುವುದು. ಅಂದುಕೊಂಡ ಕಾರ್ಯಗಳನ್ನು ನೆರವೇರಿಸುವಿರಿ. ಸಂಗಾತಿಯ ಸಹಕಾರ ಸಿಗುವುದರಿಂದ ಮನಸ್ಸಿಗೆ ನಿರಾಳವಾಗುವುದು. ಆದರೆ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಪುಷ್ಯ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಪುನರ್ವಸು ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ...

news

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.