ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು, ಗುರುವಾರ, 18 ಜುಲೈ 2019 (09:04 IST)

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


 
ಮೇಷ: ನಿರುದ್ಯೋಗಿಗಳಿಗೆ ತಕ್ಕ ಉದ್ಯೋಗ ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಏಳಿಗೆಗೆ ಸಹೋದ್ಯೋಗಿಗಳ ಸಹಕಾರ ಸಿಗುವುದು. ಕಿರು ಸಂಚಾರ ಯೋಗವಿದೆ. ಆದರೆ ದುಡುಕಿನ ವರ್ತನೆ, ನಿರ್ಧಾರ ಕೈಗೊಳ್ಳಬೇಡಿ.
 
ವೃಷಭ: ಇದುವರೆಗೆ ಕಾಡುತ್ತಿದ್ದ ಆರೋಗ್ಯ ಸಮಸ್ಯೆ ನಿಧಾನವಾಗಿ ದೂರವಾಗುವುದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರುತ್ಸಾಹ ಕಂಡುಬರವುದು. ಅನಿರೀಕ್ಷಿತವಾಗಿ ಅಚ್ಚರಿಯ ವಾರ್ತೆ ಕೇಳುವಿರಿ.
 
ಮಿಥುನ: ಎಷ್ಟೇ ಅಡೆತಡೆಗಳಿದ್ದರೂ ದೃಢ ನಿಶ‍್ಚಯದಿಂದ ಮುನ್ನಡೆದರೆ ಕಾರ್ಯ ಸಾಧನೆಯಾಗಲಿದೆ. ಕಾರ್ಮಿಕ ವರ್ಗದವರಿಗೆ ತೊಂದರೆಗಳು ಎದುರಾಗಬಹುದು. ಕುಟುಂಬದಲ್ಲಿ ಶಾಂತಿ ಸಮಾಧಾನ ನೆಲೆಸಲಿದೆ.
 
ಕರ್ಕಟಕ: ಅವಿವಾಹಿತರ ವಿವಾಹ ಪ್ರಯತ್ನಕ್ಕೆ ಮುನ್ನಡೆ ದೊರಕಲಿದೆ. ಸಾಮಾಜಿಕವಾಗಿ ಸ್ಥಾನಮಾನ ಹೆಚ್ಚುವುದು. ಕೆಳ ಹಂತದ ನೌಕರರಿಗೆ ಬಡ್ತಿ ಯೋಗವಿದೆ. ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯವಿದೆ.
 
ಸಿಂಹ: ಅನಿರೀಕ್ಷಿತವಾಗಿ ಬರುವ ನೆಂಟರಿಂದ ಶುಭ ಸುದ್ದಿ ನಿರೀಕ್ಷಿಸಬಹುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಆದಾಯವಿದ್ದಷ್ಟೇ ಖರ್ಚೂ ಮಾಡುವಿರಿ. ಎಚ್ಚರಿಕೆ ಅಗತ್ಯ. ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ.
 
ಕನ್ಯಾ: ವೃತ್ತಿರಂಗದಲ್ಲಿ ಎಷ್ಟೇ ದುಡಿದರೂ ಸೂಕ್ತ ಪ್ರತಿಫಲ ಸಿಗುತ್ತಿಲ್ಲ ಎಂಬ ಕೊರಗು ಕಾಡಲಿದೆ. ಆದರೆ ಕೌಟುಂಬಿಕವಾಗಿ ಸಂಗಾತಿಯಿಂದ ನಿಮ್ಮ ಕಷ್ಟಗಳಿಗೆ ಸಹಕಾರ ಸಿಗುವುದರಿಂದ ನೆಮ್ಮದಿ ಸಿಗುವುದು.
 
ತುಲಾ: ಇಂದು ಬರುವಂತಹ ಸಣ್ಣ ಪುಟ್ಟ ಸಮಸ್ಯೆಗಳು ನಿಭಾಯಿಸಿಕೊಂಡು ಹೋದರೆ ಸಾಕಷ್ಟು ಶುಭ ಫಲ ನಿರೀಕ್ಷಿಸಬಹುದು. ಕುಲದೇವರ ದರ್ಶನ ಮಾಡುವಿರಿ. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗವಾಗುವುದು.
 
ವೃಶ್ಚಿಕ: ತಾಳ್ಮೆ, ಸಮಾಧಾನದಿಂದ ಮುನ್ನಡೆದರೆ ಕಾರ್ಯ ಸಾಧನೆಯಾಗಲಿದೆ. ಅನಿರೀಕ್ಷಿತವಾಗಿ ಧನಲಾಭವಾಗಲಿದೆ. ವೃತ್ತಿರಂಗದ ಕಿರಿ ಕಿರಿಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ.
 
ಧನು: ಮಾತಿನ ಮೇಲೆ ನಿಗಾ ಇರಲಿ. ದುಡುಕು ವರ್ತನೆಯಿಂದ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ವಿದ್ಯಾರ್ಥಿಗಳು ಶಿಕ್ಷಕ ವೃಂದದವರ ಪ್ರಶಂಸೆಗೊಳಗಾಗುವರು. ಬಂಧು ಮಿತ್ರರ ಸಹಾಯ ದೊರಕಲಿದೆ. ಆದಾಯ ಹೆಚ್ಚುವುದು.
 
ಮಕರ: ಕುಲದೇವರ ಆರಾಧನೆಯಿಂದ ನೆಮ್ಮದಿ ಪಡೆಯುವಿರಿ. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಖರ್ಚುವೆಚ್ಚಗಳಾಗಲಿವೆ. ವಾಹನ ಸವಾರರು ಎಚ್ಚರಿಕೆಯಿಂದಿರಬೇಕು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
 
ಕುಂಭ: ಕೌಟುಂಬಿಕವಾಗಿ ನೆಮ್ಮದಿಯ ವಾತಾವರಣವಿರುತ್ತದೆ. ಪತ್ನಿ, ಮಕ್ಕಳ ಸಹಕಾರ ಸಿಗುವುದು. ಅನಿರೀಕ್ಷಿತವಾಗಿ ಹಳೆಯ ಮಿತ್ರನ ಭೇಟಿಯಾಗುವಿರಿ. ವೃತ್ತಿರಂಗದಲ್ಲಿ ಮುನ್ನಡೆಯಿರಲಿದೆ. ನಿರುದ್ಯೋಗಿಗಳು ಸ್ವಲ್ಪ ದಿನ ಕಾಯಬೇಕಾಗುತ್ತದೆ.
 
ಮೀನ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಶಸ್ಸು ಸಿಗಲಿದೆ. ದಂಪತಿಗಳಿಗೆ ಸಂತಾನ ಫಲ ಸೂಚನೆಗಳು ಸಿಗಲಿವೆ. ಕೌಟುಂಬಿಕವಾಗಿ ಸುಂದರ ಕ್ಷಣ ನಿಮ್ಮದಾಗುವುದು. ಆರ್ಥಿಕವಾಗಿ ಖರ್ಚಿನ ಬಗ್ಗೆ ಹಿಡಿತವಿರಲಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಉತ್ತರಾಷಾಢ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

news

ಇಂದು ಚಂದ್ರಗ್ರಹಣ: ಯಾವೆಲ್ಲಾ ರಾಶಿ, ನಕ್ಷತ್ರದವರಿಗೆ ದೋಷವಿದೆ?

ಬೆಂಗಳೂರು: ಇಂದು ಮಧ್ಯರಾತ್ರಿ ಉತ್ತರಾಷಾಢ ನಕ್ಷತ್ರದಲ್ಲಿ ಚಂದ್ರನಿಗೆ ಕೇತುಗ್ರಹಣ ಸಂಭವಿಸಲಿದೆ. ಇದರ ದೋಷ ...