ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು, ಮಂಗಳವಾರ, 30 ಜುಲೈ 2019 (08:47 IST)

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


 
ಮೇಷ: ಖರ್ಚು ವೆಚ್ಚಗಳು ಚಿಂತೆಗೆ ಕಾರಣವಾಗುವುದು. ಮನಸ್ಸಿನ ಒಳಗಿನ ಬೇಸರ ಮರೆಮಾಚಿ ಕರ್ತವ್ಯ ಪಾಲನೆ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಮಕ್ಕಳಿಂದ ಶುಭ ಫಲ ನಿರೀಕ್ಷಿಸಬಹುದು. ಆರೋಗ್ಯದಲ್ಲಿ ಸುಧಾರಣೆಯಾಗುವುದು.
 
ವೃಷಭ: ದೈವಾನುಕೂಲದಿಂದ ಅಂದುಕೊಂಡ ಕಾರ್ಯ ನೆರವೇರಿಸುವಿರಿ. ನಿಮ್ಮ ದೃಢ ನಿರ್ಧಾರಗಳು ಕಾರ್ಯ ಸಾಧನೆಗೆ ಅನುಕೂಲವಾಗಲಿದೆ. ಆರ್ಥಿಕವಾಗಿ ಬರಬೇಕಾದ ಹಣ ಪಾವತಿಯಾಗಲಿದೆ. ದಾಯಾದಿಗಳ ಬಗ್ಗೆ ಜಾಗ್ರತೆ ವಹಿಸಿ.
 
ಮಿಥುನ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಒದ್ದಾಟ ತಪ್ಪದು. ತಾಳ್ಮೆ ಸಮಾಧಾನದಿಂದ ಮುನ್ನಡೆಯಬೇಕಾದ ದಿನವಿದು. ಸಾಂಸಾರಿಕವಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಆಲಸ್ಯತನ ಕಂಡುಬಂದೀತು.
 
ಕರ್ಕಟಕ: ಕೆಲಸ ಕಾರ್ಯಗಳಲ್ಲಿ ವಿಳಂಬ ಗತಿ ತೋರಿಬರಲಿದೆ. ಹೊಸ ಜನರು, ಬಂಧು ಮಿತ್ರರ  ಭೇಟಿಯಿಂದ ಮನಸ್ಸಿಗೆ ಸಂತಸವಾಗುವುದು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಯಶಸ್ಸು ಸಾಧಿಸಲಿದ್ದಾರೆ.
 
ಸಿಂಹ: ನಿರುದ್ಯೋಗಿಗಳು ಸ್ವ ಉದ್ಯೋಗದತ್ತ ಮನಸ್ಸು ಮಾಡಲಿದ್ದಾರೆ. ದೃಢ ನಿರ್ಧಾರದಿಂದ ಮುನ್ನಡೆಯಿರಿ. ಅನಿರೀಕ್ಷಿತವಾಗಿ ದೊರಕುವ ಯಶಸ್ಸು ಮನಸ್ಸಿಗೆ ಸಮಾಧಾನ ನೀಡಲಿದೆ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಕನ್ಯಾ: ಸಾಂಸಾರಿಕವಾಗಿ ನಿರ್ಧಾರ ತೆಗೆದುಕೊಳ್ಳಲು ಚಂಚಲ ಮನಸ್ಸು ತೊಂದರೆ ಉಂಟುಮಾಡಬಹುದು. ಸಂಗಾತಿಯ ಸಹಕಾರ ಸಿಗುವುದು. ದೂರ ಸಂಚಾರದಲ್ಲಿ ಎಚ್ಚರಿಕೆ ಅಗತ್ಯ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡವಿರಲಿದೆ.
 
ತುಲಾ: ಮೇಲಧಿಕಾರಿಗಳು ನಿಮ್ಮ ಬಗ್ಗೆ ಅತಿಯಾದ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಪಾಲಿಗೆ ಬಂದಿದ್ದನ್ನು ಬಳಸಿಕೊಳ್ಳುವ ಜಾಣತನ ಪ್ರದರ್ಶಿಸಿ. ವಾಹನ ಸವಾರರಿಗೆ ವಿಘ್ನಗಳು ಎದುರಾದೀತು. ಎಚ್ಚರಿಕೆ ಅಗತ್ಯ.
 
ವೃಶ್ಚಿಕ: ಕೃಷಿ ಕ್ಷೇತ್ರದಲ್ಲಿರುವವರ ಸಮಸ್ಯೆಗಳು ಪರಿಹಾರವಾಗಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಕುಲದೇವರ ಹರಕೆ ತೀರಿಸುವಿರಿ. ಕೌಟುಂಬಿಕ ಜವಾಬ್ಧಾರಿಗಳನ್ನು ನಿಭಾಯಿಸಲು ಓಡಾಟ ನಡೆಸಬೇಕಾಗುತ್ತದೆ.
 
ಧನು: ಸಂತಾನಾಪೇಕ್ಷಿತ ದಂಪತಿಗಳಿಗೆ ಹೊಸ ಆಶಾಕಿರಣ ಮೂಡಲಿದೆ. ಹಾಗಿದ್ದರೂ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಾಗಬಹುದು. ವಿದ್ಯಾರ್ಥಿಗಳು ಕಠಿಣ ಪರಿಶ್ರಮಪಟ್ಟರಷ್ಟೇ ಉತ್ತಮ ಫಲ ಸಿಗಬಹುದು.
 
ಮಕರ: ಸರಕಾರಿ ಕೆಲಸಗಳಲ್ಲಿ ನಿರಾಯಾಸವಾಗಿ ಗೆಲುವು ಸಾಧಿಸುವಿರಿ. ಹಿರಿಯರ ಮಾತಿಗೆ ಕಿವಿಗೊಡಿ. ವ್ಯಾಪಾರಿಗಳು ನಿವ್ವಳ ಲಾಭ ಗಳಿಸುವರು. ವಿದ್ಯಾರ್ಥಿಗಳು ಶಿಕ್ಷಕ ವೃಂದದವರ ಪ್ರಶಂಸೆಗೊಳಗಾಗಲಿದ್ದಾರೆ.
 
ಕುಂಭ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ಹೆಚ್ಚುವುದು. ಆದರೆ ಮನೆಯಲ್ಲಿ ಸಂಗಾತಿಯಿಂದ ನಿಂದನೆಗೆ ಗುರಿಯಾಗುವಿರಿ. ಹಿತಶತ್ರುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಆರ್ಥಿಕವಾಗಿ ಹಣ ಗಳಿಕೆ ಮಾಡುವಿರಿ.
 
ಮೀನ: ನಿರುದ್ಯೋಗಿಗಳು ಸದವಾಕಾಶಕ್ಕಾಗಿ ಕಾಯಬೇಕಾಗುತ್ತದೆ. ಶುಭ ಮಂಗಲ ಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ. ನೂತನ ದಂಪತಿಗಳಲ್ಲಿ ವಿರಸ ಮೂಡಬಹುದು. ತಾಳ್ಮೆಯಿಂದಿದ್ದರೆ ಉತ್ತಮ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ನಾಗಾರಾಧನೆಯನ್ನು ಯಾವಾಗ ಮಾಡಬೇಕು?

ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ನಾಗದೇವರಿಗೆ ಆಶ್ಲೇಷ ಪೂಜೆ, ಸರ್ಪಸಂಸ್ಕಾರ ಮಾಡುವ ಮೂಲಕ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಈ ದಿನ ದೀಪ ದಾನ ಮಾಡಿದರೆ ಒಳ್ಳೆಯದು

ಬೆಂಗಳೂರು: ದೀಪ ದಾನ ಮಾಡುವುದರಿಂದ ನಿಮಗೆ ಒಳಿತಾಗುತ್ತದೆ. ದೀಪ ಅದೃಷ್ಟದ ಸಂಕೇತ. ಹೀಗಾಗಿ ಅದನ್ನು ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.