ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.ಮೇಷ: ಹಣಕಾಸಿನ ಸಂಪಾದನೆಗೆ ನಾನಾ ಮಾರ್ಗಗಳು ಗೋಚರವಾಗಲಿದೆ. ಬಹುದಿನಗಳ ಕನಸು ಈಡೇರಿಸಲು ಮುಂದಾಗುವಿರಿ. ಸಾಂಸಾರಿಕವಾಗಿ ಸಂಗಾತಿಯ ಅಭಿಪ್ರಾಯಗಳಿಗೂ ಕಿವಿಗೊಡಬೇಕಾಗುತ್ತದೆ.ವೃಷಭ: ಏಕಾಂಗಿಯಾಗಿ ಕೈಗೊಳ್ಳುವ ನಿರ್ಧಾರದಿಂದ ಹಿನ್ನಡೆ ಅನುಭವಿಸಬೇಕಾಗುತ್ತದೆ. ವೃತ್ತಿರಂಗದಲ್ಲಿ ಲವ ಲವಿಕೆಯಿಂದ ಕೆಲಸ ಮಾಡುವಿರಿ. ಕಚೇರಿ ಕೆಲಸಗಳಲ್ಲಿ ಜಯ. ವಿವಾಹ ಪ್ರಯತ್ನಗಳಲ್ಲಿ ಸಫಲತೆ ಕಾಣುವಿರಿ.ಮಿಥುನ: ಸಹನಶೀಲನೆ ಮೈಗೂಡಿಸಿಕೊಂಡರೆ ಇಂದು ಕಾರ್ಯಗಳಲ್ಲಿ ಯಶಸ್ಸು ಸಾಧಿಸಬಹುದು. ಆರ್ಥಿಕವಾಗಿ ಲಾಭ ಗಳಿಸುವಿರಿ. ವಿದ್ಯಾರ್ಥಿಗಳಿಗೆ ಕಠಿಣ