ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು, ಮಂಗಳವಾರ, 6 ಆಗಸ್ಟ್ 2019 (09:01 IST)

ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


 
ಮೇಷ: ಕ್ರಿಯಾತ್ಮಕ ಕೆಲಸಗಳ ಕಡೆಗೆ ಮನಸ್ಸು ವಾಲುವುದು. ನಿಮ್ಮ ಕೆಲವೊಂದು ಧೋರಣೆಗಳು ಸಂಗಾತಿಗೆ ಇಷ್ಟವಾಗದೇ ಹೋಗಬಹುದು. ಆದಷ್ಟು ತಾಳ್ಮೆಯಿಂದ ವ್ಯವಹರಿಸಿ. ಕೋಪದ ಕೈಗೆ ಬುದ್ಧಿ ಕೊಡಲು ಹೋದರೆ ಕಾರ್ಯ ಕೆಟ್ಟೀತು.
 
ವೃಷಭ: ಪ್ರೇಮಿಗಳ ಗುಟ್ಟು ಮನೆಯವರ ಎದುರು ಬಹಿರಂಗವಾಗಲಿದೆ. ನಿರುದ್ಯೋಗಿಗಳು ಸ್ವ ಉದ್ಯೋಗದ ಕಡೆಗೆ ಗಮನಹರಿಸುವುದು ಒಳ್ಳೆಯದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗುವುದು. ಚಿಂತೆ ಬೇಡ.
 
ಮಿಥುನ: ವೃಥಾ ಇಬ್ಬರ ಜಗಳದಲ್ಲಿ ಮೂಗು ತೂರಿಸಲು ಹೋಗಬೇಡಿ. ವ್ಯಾಜ್ಯಗಳಿಂದ ಆದಷ್ಟು ದೂರವಿರುವುದೇ ಒಳ್ಳೆಯದು. ಇಷ್ಟ ಮಿತ್ರರೊಂದಿಗೆ ಭೋಜನ ಮಾಡುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಕರ್ಕಟಕ: ಆಪ್ತ ಮಿತ್ರರ ಸಂಕಷ್ಟಗಳಿಗೆ ಹೆಗಲು ಕೊಡುವಿರಿ. ಕೆಲವೊಂದು ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಲಿವೆ. ಆಶಾವಾದಿಗಳಾಗಿರಿ. ಹೊಸ ವ್ಯವಹಾರಗಳಿಗೆ ಕೈ ಹಾಕಲು ಕೆಲವು ದಿನ ಕಾಯುವುದು ಉತ್ತಮ.
 
ಸಿಂಹ: ವಾಣಿಜ್ಯೋದ್ಯಮಿಗಳಿಗೆ ನಿರೀಕ್ಷಿತ ಲಾಭ ಕೈಹಿಡಿಯುವುದು. ರಾಜಕೀಯವಾಗಿ ಉತ್ತಮ ಸ್ಥಾನ ಮಾನ ಪಡೆಯುವಿರಿ. ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಕುಲದೇವರ ಪ್ರಾರ್ಥನೆ ಮಾಡಿದರೆ ಶುಭ ಫಲ.
 
ಕನ್ಯಾ: ಸಂಗಾತಿಯ ಅಲಂಕಾರಿಕ ವಸ್ತುಗಳಿಗೆ ಹೆಚ್ಚಿನ ಧನವಿನಿಯೋಗ ಮಾಡಬೇಕಾಗುತ್ತದೆ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ. ದಾಯಾದಿಗಳೊಂದಿಗೆ ಮನಸ್ತಾಪಗಳು ತಿಳಿಯಾಗುವುದು. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
 
ತುಲಾ: ದೈವಾನುಕೂಲದಿಂದ ನೀವು ಇಷ್ಟು ದಿನ ಕಷ್ಟವೆಂದು ಕೂತಿದ್ದ ಕೆಲಸಗಳು ಹೂವೆತ್ತಿದಂತೆ ಸುಗಮವಾಗಿ ನೆರವೇರುವುದು. ಧಾರ್ಮಿಕ ಕಾರ್ಯಗಳಿಗೆ ಧನವಿನಿಯೋಗ ಮಾಡುವಿರಿ. ಸಹೋದರಿಯಿಂದ ಶುಭ ವಾರ್ತೆ.
 
ವೃಶ್ಚಿಕ: ಆಲಸ್ಯತನಕ್ಕೆ ವಿರಾಮ ಹಾಕಿ ಕಷ್ಟಪಟ್ಟು ದುಡಿದರೆ ತಕ್ಕ ಪ್ರತಿಫಲ ಸಿಗುವುದು. ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ಸಿಗುವುದು. ಕೃಷಿ ಕ್ಷೇತ್ರದಲ್ಲಿರುವವರಿಗೆ ಕೊಂಚ ಹಿನ್ನಡೆಯಾಗಬಹುದು. ತಾಳ್ಮೆಗೆಡಬೇಡಿ.
 
ಧನು: ಮಾತಿನ ಮೇಲೆ ನಿಗಾ ವಹಿಸಿ. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಹಿತಶತ್ರುಗಳು ನಿಮ್ಮ ಒಳ್ಳೆಯತನದ ದುರುಪಯೊಗಪಡಿಸಿಕೊಂಡಾರು. ಧನ ಲಾಭವಾಗಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗುವುದು.
 
ಮಕರ: ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯುವಿರಿ. ಸಂತಾನಾಪೇಕ್ಷಿತ ದಂಪತಿಗಳು ದೇವರ ಮೊರೆ ಹೋಗುವುದು ಉತ್ತಮ. ಆದಾಯ ದ್ವಿಗುಣವಾಗುವುದು.
 
ಕುಂಭ: ಅಧಿಕ ಓಡಾಟದಿಂದ ದೇಹಾಯಾಸವಾಗಬಹುದು. ಹಾಗಿದ್ದರೂ ನೀವು ಅಂದುಕೊಂಡ ಕೆಲಸಗಳು ನೆರವೇರುವುದರಿಂದ ಮನಸ್ಸಿಗೆ ನೆಮ್ಮದಿಯಾಗುವುದು. ಬಂಧು ಮಿತ್ರರ ಆಗಮನವಾಗಲಿದೆ. ಖರ್ಚು ವೆಚ್ಚಗಳು ಹೆಚ್ಚುವುದು.
 
ಮೀನ: ಪ್ರೀತಿ ಪಾತ್ರರ ಕಷ್ಟಗಳಿಗೆ ಹೆಗಲುಕೊಡಬೇಕಾಗುತ್ತದೆ. ಕೌಟುಂಬಿಕವಾಗಿ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರವಹಿಸಿ. ಮಹಿಳಾ ಉದ್ಯೋಗಿಗಳಿಗೆ ಶುಭ ಫಲಗಳಿವೆ. ದೇವತಾ ಪ್ರಾರ್ಥನೆ ಮಾಡಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಶಿವನಿಗಿರುವ ಈ ಮೂರು ಹೆಸರುಗಳ ಅರ್ಥ ಗೊತ್ತಾ?

ಬೆಂಗಳೂರು: ಭಗವಾನ್ ಶಿವನನ್ನು ನಾವು ತ್ರಿನೇತ್ರ, ಕರ್ಪೂರಗೌರ ಮತ್ತು ಮಹಾದೇವ ಎಂಬ ಹೆಸರಿನಿಂದ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಈ ದಾನ ಮಾಡಿದರೆ ಯಮದೂತರ ಭಯದಿಂದ ದೂರವಾಗಬಹುದು!

ಬೆಂಗಳೂರು: ಗರುಡ ಪುರಾಣದ ಪ್ರಕಾರ ಹತ್ತಿಯಿಂದ ಮಾಡಿದ ಬಟ್ಟೆಗಳ ದಾನ ಮಾಡಿದವರು ಯಮದೂತರ ಭಯದಿಂದ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.