Widgets Magazine

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಬೆಂಗಳೂರು| Krishnaveni K| Last Modified ಮಂಗಳವಾರ, 20 ಆಗಸ್ಟ್ 2019 (09:14 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

 
ಮೇಷ: ಪ್ರೀತಿ ಪಾತ್ರರ ಭೇಟಿ ಮನಸ್ಸಿಗೆ ಮುದ ನೀಡುವುದು. ಕಾರ್ಯನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಸಿಗುವುದು. ಸಂಗಾತಿಯೊಂದಿಗೆ ದುಡುಕಿನ ಮಾತನಾಡಿದರೆ ಕಲಹವಾದೀತು. ಎಚ್ಚರ.
 
ವೃಷಭ: ದಾಯಾದಿಗಳೊಂದಿಗಿನ ಆಸ್ತಿ ವಿವಾದಗಳಿಗೆ ತಾತ್ಕಾಲಿಕ ಪರಿಹಾರ ಸಿಗುವುದು. ಹಿರಿಯ ಮಾತುಗಳಿಗೆ ಮನ್ನಣೆ ನೀಡಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಪ್ರಶಂಸೆಗೊಳಗಾಗುವಿರಿ. ಕೋರ್ಟು, ಕಚೇರಿ ವ್ಯವಹಾರದಲ್ಲಿ ಜಯ ಸಿಗುವುದು.
 
ಮಿಥುನ: ಎಷ್ಟೋ ದಿನದ ಬಳಿಕ ಹಳೆಯ ಮಿತ್ರನೊಬ್ಬನ ಭೇಟಿ ಮನಸ್ಸಿಗೆ ಖುಷಿ ನೀಡಲಿದೆ. ಕೌಟುಂಬಿಕವಾಗಿ ಅನಿರೀಕ್ಷಿತವಾಗಿ ಕೆಲವೊಂದು ಖರ್ಚು ವೆಚ್ಚಗಳು ಎದುರಾಗಲಿವೆ. ಸಂತಾನ ಹೀನ ದಂಪತಿ ದೇವರ ಮೊರೆ ಹೋಗುವರು.
 
ಕರ್ಕಟಕ: ಹೊಸ ಕೆಲಸಗಳಿಗೆ ಕೈ ಹಾಕಲು ಇಂದು ಉತ್ತಮ ದಿನ. ಆರ್ಥಿಕವಾಗಿ ಲಾಭ ಗಳಿಸುವಿರಿ. ಸಣ್ಣ ವ್ಯಾಪಾರಿಗಳು ಕೊಂಚ ಹಿನ್ನಡೆ ಅನುಭವಿಸಿಯಾರು. ಆದರೆ ಚಿಂತ ಬೇಡ. ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಮುನ್ನಡೆ ಕಂಡುಬರಲಿದೆ.
 
ಸಿಂಹ: ಸಾಮಾಜಿಕವಾಗಿ ನಿಮ್ಮ ಕೆಲಸಗಳಿಗೆ ತಕ್ಕ ಮನ್ನಣೆ, ಗೌರವ ಸಿಗುವುದು. ಉತ್ತಮ ಹೆಸರು ಸಂಪಾದಿಸಲಿದ್ದೀರಿ. ವಿದ್ಯಾರ್ಥಿಗಳು ಶಿಕ್ಷಕರ ಪ್ರಶಂಸೆಗೆ ಪಾತ್ರರಾಗುವರು. ನಿರುದ್ಯೋಗಿಗಳಿಗೆ ನಿರೀಕ್ಷಿತ ಫಲ ಸಿಗುವುದ. ದೇವತಾ ಪ್ರಾರ್ಥನೆ ಮಾಡುವುದನ್ನು ಮರೆಯದಿರಿ.
 
ಕನ್ಯಾ: ಸಾಂಸಾರಿಕವಾಗಿ ಇದುವರೆಗೆ ಇದ್ದ ಸಮಸ್ಯೆಗಳಿಗೆ ಒಂದು ರೀತಿಯ ಅಂತ್ಯ ಸಿಗಲಿದೆ. ಸಂಗಾತಿಯ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುವುದು ಮುಖ್ಯ. ಉದ್ಯೋಗ ಕ್ಷೇತ್ರದಲ್ಲಿ ಅಧಿಕ ಕಾರ್ಯದೊತ್ತಡ ದೇಹಾಯಾಸವಾಗುವಂತೆ ಮಾಡುತ್ತದೆ.
 
ತುಲಾ: ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಸಹೋದರಿಯರ ವಿವಾಹ ಪ್ರಯತ್ನದಲ್ಲಿ ಫಲ ಕಾಣುವಿರಿ. ಸ್ವ ಉದ್ಯೋಗಿಗಳು ನಿವ್ವಳ ಲಾಭ ಗಳಿಸುವರು. ಹೊಸ ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
 
ವೃಶ್ಚಿಕ: ವೃತ್ತಿ ಸಂಬಂಧವಾಗಿ ಆಗುವ ಮನೋಕ್ಷೋಭೆಗಳನ್ನು ಮನೆಗೆ ತರಬೇಡಿ. ಮಡದಿ ಮಕ್ಕಳೊಂದಿಗೆ ಕೋಪದಿಂದ ವರ್ತಿಸಿದರೆ ಸಂಬಂಧ ಹಾಳಾದೀತು ಎಂಬುದನ್ನು ಮರೆಯದಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡುಬರವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.
 
ಧನು: ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ಆದರೆ ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ. ಅಪ್ಪ-ಮಕ್ಕಳ ನಡುವೆ ವಿರಸ ಮೂಡಬಹುದು. ಆಸ್ತಿ ವಿಚಾರದಲ್ಲಿ ಹಿರಿಯರ ಮಧ್ಯಸ್ಥಿಕೆಗೆ ಪ್ರಾಶಸ್ತ್ಯ ಕೊಡಿ. ಎಷ್ಟೋ ದಿನದಿಂದ ಬಾಕಿಯಿದ್ದ ಹರಕೆ ತೀರಿಸುವಿರಿ.
 
ಮಕರ: ಎಷ್ಟೋ ದಿನದಿಂದ ಬಾಕಿಯಿದ್ದ ಹರಕೆ ತೀರಿಸುವಿರಿ. ಧಾರ್ಮಿಕ ಭಾವನೆ ಹೆಚ್ಚಾಗುವುದು. ಶುಭ ಮಂಗಲ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಬೇಕಾಗುತ್ತದೆ. ಪ್ರೇಮಿಗಳಿಗೆ ಮನೆಯವರಿಂದ ವಿರೋಧ ವ್ಯಕ್ತವಾಗಬಹುದು. ತಾಳ್ಮೆ ಅಗತ್ಯ.
 
ಕುಂಭ: ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ, ಸ‍್ಥಾನ ಪಲ್ಲಟವಾಗುವ ಸಾಧ‍್ಯತೆಯಿದೆ. ಮನೆ ಬದಲಾವಣೆಗೆ ಚಿಂತನೆ ನಡೆಸುವಿರಿ. ತಾತ್ಕಾಲಿಕ ವೃತ್ತಿಯವರಿಗೆ ಖಾಯಂ ಉದ್ಯೋಗ ಸಿಗುವುದು. ವ್ಯಾಪಾರ ವಹಿವಾಟಿನಲ್ಲಿ ಅಧಿಕ ಧನ ಲಾಭವಾಗಲಿದೆ. ಹಿತಶತ್ರುಗಳನ್ನು ದೂರವಿಡಿ.
 
ಮೀನ: ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಯಾರೋ ಹೇಳುವ ಚಾಡಿ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಮಕ್ಕಳ ವಿಚಾರದಲ್ಲಿ ಹೊಸ ನಿರ್ಧಾರ ಕೈಗೊಳ್ಳುವಿರಿ. ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಮುಖ್ಯ.
ಇದರಲ್ಲಿ ಇನ್ನಷ್ಟು ಓದಿ :