ಇಂದು ಚಂದ್ರಗ್ರಹಣ: ಯಾವೆಲ್ಲಾ ರಾಶಿ, ನಕ್ಷತ್ರದವರಿಗೆ ದೋಷವಿದೆ?

ಬೆಂಗಳೂರು, ಮಂಗಳವಾರ, 16 ಜುಲೈ 2019 (08:58 IST)

ಬೆಂಗಳೂರು: ಇಂದು ಮಧ್ಯರಾತ್ರಿ ಉತ್ತರಾಷಾಢ ನಕ್ಷತ್ರದಲ್ಲಿ ಚಂದ್ರನಿಗೆ ಕೇತುಗ್ರಹಣ ಸಂಭವಿಸಲಿದೆ. ಇದರ ದೋಷ ಯಾರಿಗೆಲ್ಲಾ ಇದೆ? ಏನು ಪರಿಹಾರ ನೋಡೋಣ.


 
ಧನುರಾಶಿಯಲ್ಲಿ ಗ್ರಹಣ ಸ್ಪರ್ಶವಾಗಲಿದ್ದು, ಮಕರ ರಾಶಿಯಲ್ಲಿ ಮೋಕ್ಷವಾಗಲಿದೆ. ಗ್ರಹಣ ಸ್ಪರ್ಶ ಕಾಲ ರಾತ್ರಿ 1.31 ಗಂಟೆಗೆ, ಮಧ್ಯ ಕಾಲ 3.01 ಗಂಟೆಗೆ, ಗ್ರಹಣ ಮೋಕ್ಷ ಕಾಲ ಬೆಳಿಗ್ಗಿನ ಜಾವ 4.30 ಕ್ಕೆ.
 
ಗ್ರಹಣ ದೋಷವಿರುವ ನಕ್ಷತ್ರ ಮತ್ತು ರಾಶಿಗಳು:
ನಕ್ಷತ್ರಗಳು: ಕೃತ್ತಿಕಾ, ಉತ್ತರಾ, ಪೂರ್ವಾಷಾಢ, ಉತ್ತರಾಷಾಢ ಮತ್ತು ಶ್ರವಣ
ರಾಶಿಗಳು: ವೃಷಭ, ಮಿಥುನ, ಕರ್ಕಟಕ, ಸಿಂಹ, ಧನು, ಮಕರ ಮತ್ತು ಕುಂಭ.
ದೋಷ ಪರಿಹಾರಗಳು: ಗ್ರಹಣ ಪೂರ್ವ ಮತ್ತು ಮೋಕ್ಷದ ನಂತರ ಸ್ನಾನ ಮಾಡುವುದು. ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಮಾಡುವುದು. ಮರುದಿನ ಬೆಳಿಗ್ಗೆ ಈಶ್ವರ ದೇವಾಲಯಕ್ಕೆ ದೀಪದ ಎಣ್ಣೆ ದಾನ ಮಾಡುವುದು. ದೇವಾಲಯಗಳಿಗೆ ತೆರಳಿ ಪ್ರದಕ್ಷಿಣೆ ನಮಸ್ಕಾರ ಮಾಡುವುದು, ಗ್ರಹಣಕ್ಕೆ ಸಂಬಂಧಿಸಿದ ಧಾನ್ಯಗಳನ್ನು ಬ್ರಾಹ್ಮಣರಿಗೆ ದಾನ ಮಾಡುವುದರಿಂದ ದೋಷ ಪರಿಹಾರವಾಗುವುದು.
 
ಇಂದು ಸಂಜೆ 4.30 ರೊಳಗೆ ಊಟೋಪಚಾರಗಳನ್ನು ಮುಗಿಸಬೇಕು. ವೃದ್ಧರು, ಅಶಕ್ತರು, ಮಕ್ಕಳು ರಾತ್ರಿ 9 ರೊಳಗೆ ಊಟ ಮುಗಿಸಬೇಕು.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಪೂರ್ವಾಷಾಢ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ಮೂಲ ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?

ಬೆಂಗಳೂರು: ಪ್ರತೀ ನಕ್ಷತ್ರಕ್ಕೂ ಒಂದೊಂದು ಗ್ರಹಾಧಿಪತಿ ಇದ್ದಾರೆ. ಆಯಾ ಗ್ರಹಾಧಿಪತಿಗಳಿಗೆ ಅನುಸಾರವಾಗಿ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.