ಬೆಂಗಳೂರು: ನಮಗೆ ಪ್ರತಿನಿತ್ಯ ಬೀಳುವ ಕನಸುಗಳಿಗೆ ವಿಶೇಷ ಅರ್ಥವಿದೆಯೇ? ನಮಗೆ ಬೀಳುವ ಕನಸುಗಳಿಗೆ ಅರ್ಥವೇನು ಎಂದು ಹಲವರಲ್ಲಿ ಜಿಜ್ಞಾಸೆಯಿರಬಹುದು.ಕನಸುಗಳು ಕೆಲವೊಮ್ಮೆ ನಮಗೆ ಭಯ ಹುಟ್ಟಿಸಿದರೆ, ಇನ್ನು ಕೆಲವೊಮ್ಮೆ ದಿನವಿಡೀ ಒಂದು ರೀತಿಯ ಉತ್ಸಾಹ ತುಂಬುತ್ತದೆ. ಕೆಲವೊಂದು ಕನಸುಗಳು ನೆನಪಿನಲ್ಲಿ ಉಳಿಯುತ್ತವೆ. ಇನ್ನು ಕೆಲವು ಅರೆಕ್ಷಣದಲ್ಲಿ ಮರೆತೇ ಬಿಡುತ್ತೇವೆ.ಬೆಳಗಿನ ಜಾವದಲ್ಲಿ ಬೀಳುವ ಕನಸು ನಿಜವಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಕೆಲವೊಮ್ಮೆ ಬೆಳಗಿನ ಜಾವದಲ್ಲಿ ಯಾರೋ ನಮ್ಮ ಆತ್ಮೀಯರೇ ಸಾವನ್ನಪ್ಪಿದ ರೀತಿ ಕನಸು