ಸಹನಾ ವವತು ಮಂತ್ರ ಯಾವಾಗ ಹೇಳಬೇಕು? ಇದರ ಮಹತ್ವ ನಿಮಗೆ ಗೊತ್ತಾ?

ಬೆಂಗಳೂರು, ಶುಕ್ರವಾರ, 7 ಡಿಸೆಂಬರ್ 2018 (07:38 IST)

ಬೆಂಗಳೂರು: ಸಹನಾ ವವತು, ಸಹನೌ ಭುನಕ್ತು, ಸಹ ವೀರ್ಯಂ ಕರವಾವಹೈ, ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ, ಓಂ ಶಾಂತಿ ಶಾಂತಿಃ ಶಾಂತಿಃ.


 
ಈ ಮಂತ್ರವನ್ನು ನಾವೆಲ್ಲರೂ ಕೇಳಿರುತ್ತೇವೆ. ಆದರೆ ಇದನ್ನು ಯಾವ ಸಂದರ್ಭದಲ್ಲಿ ಹೇಳಿದರೆ ಸೂಕ್ತ ಗೊತ್ತಾ? ತಿಳಿದುಕೊಳ್ಳೋಣ.
 
ಇದು ಯಜುರ್ವೇದದ ಶಾಂತಿ ಮಂತ್ರ. ಇದು ಪಾಠ ಪ್ರಾರಂಭದಲ್ಲಿ ಶಿಷ್ಯರು ಮಾಡುವ ಪ್ರಾರ್ಥನೆ. ಇದಕ್ಕೆ ಗುರುಗಳೂ ಧ್ವನಿಗೂಡಿಸಬಹುದು.  ‘ಆವತು’ ಎನ್ನುವಲ್ಲಿ ಆವ ಎಂದರೆ ಪ್ರವೇಶ ಎಂದು ಅರ್ಥ.
 
ಓ ಭಗವಂತ ನೀನು ನನ್ನ ಗುರುವಿನೊಳಗೆ ಕೂತು ಅವರಿಗೆ ವಿದ್ಯೆಯನ್ನು ಹೇಳುವ ಶಕ್ತಿ ತುಂಬು. ನನ್ನೊಳಗೆ ಕೂತು ಗುರುಗಳು ಹೇಳುವ ಮಾತು ನನಗೆ ಅರ್ಥವಾಗುವಂತೆ ಮಾಡು ಎಂದರ್ಥ. ‘ಭುನಕ್ತು’ ಎಂದರೆ ಪಾಲಿಸುವುದು ಅಥವಾ ತಿನ್ನುವುದು ಎಂಬರ್ಥ.
 
‘ಓ ಭಗವಂತ ನಮ್ಮ ಅಧ್ಯಯನ ಕಾಲದಲ್ಲಿ ಯಾವುದೇ ವಿಘ್ನ ಬಾರದಂತೆ ನಮ್ಮನ್ನು ಕೊನೆಯತನಕ ಪಾಲಿಸು. ನಿನ್ನ ರಕ್ಷೆ ಸದಾ ನಮಗಿರಲಿ. ನಮ್ಮಿಬ್ಬರಿಗೂ ಉಣ್ಣುವುದಕ್ಕೂ ತಿನ್ನುವುದಕ್ಕೂ ಬೇಕಾಗಿರುವ ಸಮೃದ್ಧಿಯನ್ನು ಕರುಣಿಸು ಎಂಬುದು ಇದರ ಸಾರ.
 
ಸಹವೀರ್ಯಂಕರವಾವಹೈ: ಗುರುಗಳಿಗೆ ಈ ಆಧ್ಯಾತ್ಮ ವಿದ್ಯೆಯನ್ನು ನಮಗೆ ಕೊಟ್ಟು ನಮ್ಮನ್ನು ಉದ್ಧರಿಸುವಂತೆ ಮಾಡುವ ಸಾಮರ್ಥ್ಯ ಕೊಡು. ಅಧ್ಯಯನ ಶಕ್ತಿಶಾಲಿಯಾಗಿರಲಿ. ನಮಗೆ ಈ ವಿದ್ಯೆಯನ್ನು ಲೋಕಕ್ಕೆ ಉಪಯೋಗವಾಗುವಂತೆ ಬಳಸುವ ಸಾಮರ್ಥ್ಯ ಕೊಡು.
 
ತೇಜಸ್ವಿನಾಮಧೀತಮಸ್ತು ಮಾ ವಿಧ್ವಿಷಾವಹೈ: ನಮ್ಮಿಬ್ಬರ ಕೂಡುವಿಕೆಯಿಂದ ನಡೆಯುವ ಈ ಶಾಸ್ತ್ರಾಧ್ಯಯನದಿಂದ ಶಾಸ್ತ್ರದ ವರ್ಚಸ್ಸು ನಮ್ಮಲ್ಲಿ ವ್ಯಕ್ತವಾಗಲಿ. ಶಿಷ್ಯ ಪರಂಪರೆಯಿಂದ ಊರ್ಜಿತವಾಗಿ ವಿದ್ಯೆ ಮುಂದುವರಿಯಲು ಬೇಕಾಗಿರುವ ತೇಜಸ್ಸು ನಮಗೆ ಬರಲಿ. ಗುರುಗಳು ಹೇಳಿದ್ದನ್ನು ನಾನು ನನ್ನ ಮುಂದಿನ ತಲೆಮಾರಿಗೆ ಕೊಡುವ ಶಕ್ತಿ ಕರುಣಿಸು. ಕೊನೆಯ ತನಕ ನಾವು ಪ್ರೀತಿ, ಶಾಂತಿಯಿಂದ ಬಾಳುವಂತೆ ಮಾಡು.
 
ಓಂ ಶಾಂತಿಃ ಶಾಂತಿಃ: ಈ ಅನುಸಂಧಾನದ ಮೂಲಕ ನಮ್ಮ ಬದುಕಿನಲ್ಲಿ ಶಾಂತಿಯನ್ನು ಕೊಡು ಎನ್ನುವುದು ಈ ಪ್ರಾರ್ಥನೆಯ ತಾತ್ಪರ್ಯ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ರಾಹು ದೋಷದಿಂದಾಗಿ ಮದುವೆಯಾಗುತ್ತಿಲ್ಲವೇ? ಹಾಗಿದ್ದರೆ ಇಷ್ಟು ಮಾಡಿದರೆ ಸಾಕು

ಬೆಂಗಳೂರು: ವಯಸ್ಸಿಗೆ ಬಂದ ಮಗಳು, ಮಗ ಮದುವೆಯಾಗಿಲ್ಲವೆಂದರೆ ಮೊದಲು ನೆನಪಿಗೆ ಬರುವುದು ಕುಜ ದೋಷ. ಈ ...

news

ಜುಲೈ 27, 2018 ರ ದೀರ್ಘಾವಧಿಯ ಬ್ಲಡ್ ಮೂನ್: ಯಾವ ರಾಶಿಗೆ ಯಾವ ಫಲ ಗೊತ್ತಾ...?

ಸೌರಮಂಡಲದಲ್ಲಿ ಒಂದು ಗ್ರಹಕ್ಕೆ ಇನ್ನೊಂದು ಗ್ರಹದ ನೆರಳು ಸರಳ ರೇಖೆಯ ಮಾದರಿಯಲ್ಲಿ ಚಲಿಸಿದಾಗ ನಡೆಯುವ ...

news

ನಾಗ ದೋಷ ಭಾದಿಸುತ್ತಿದೆಯೇ ಇಲ್ಲಿಗೆ ಭೇಟಿಕೊಡಿ...!

ಮನುಷ್ಯ ಹುಟ್ಟಿದಾಗಿನಿಂದ ಅವನ ಕರ್ಮಗಳನ್ನು ನಾವು ಜಾತಕದ ಮೂಲಕ ತಿಳಿದುಕೊಳ್ಳಬಹುದು. ಕೆಲವೊಮ್ಮೆ ಈ ...

news

ರಾಶಿಗನುಗುಣವಾಗಿ ನಿಮ್ಮ ಸಂಗಾತಿ ಎಷ್ಟು ಪ್ರಾಮಾಣಿಕರು ಎಂದು ತಿಳಿಯಿರಿ!

ಬೆಂಗಳೂರು: ನಿಮ್ಮ ಸಂಗಾತಿ ನಿಮ್ಮೊಂದಿಗೆ ಎಷ್ಟು ಪ್ರಾಮಾಣಿಕರಾಗಿದ್ದಾರೆ? ಹೀಗೊಂದು ಕುತೂಹಲ ನಿಮಗಿರಬಹುದು. ...