ಬೆಂಗಳೂರು: ಮೂಲ ನಕ್ಷತ್ರ ಎನ್ನುವುದು ಮಹಿಳೆಯರ ಪಾಲಿಗೆ ಶಾಪಗ್ರಸ್ತ ನಕ್ಷತ್ರ ಎಂದು ಧಾರ್ಮಿಕ ನಂಬಿಕೆ ಇರುವವರು ನಂಬುತ್ತಾರೆ. ಮಹಿಳೆಯ ವಿವಾಹ ಜೀವನಕ್ಕೆ ಈ ನಕ್ಷತ್ರ ತೊಡಕಾಗುತ್ತದೆ ಎನ್ನಲಾಗುತ್ತದೆ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಕ್ಷತ್ರದಲ್ಲಿ ಜನಿಸಿದವರು ಬುದ್ಧಿವಂತರಾಗಿರುತ್ತಾರೆ. ಇವರಿಗೆ ಬದುಕುವುದು ಹೇಗೆ ಎಂಬುದು ಚೆನ್ನಾಗಿ ಗೊತ್ತಿರುತ್ತದೆ. ಆದರೆ ವೈವಾಹಿಕ ಜೀವನ ಮಾತ್ರ ಅಷ್ಟೊಂದು ಸುಖಕರವಾಗಿರುವುದಿಲ್ಲ.ಮೂಲ ನಕ್ಷತ್ರದಲ್ಲಿ ಜನಿಸಿದ ಹೆಣ್ಣನ್ನು ಮದುವೆಯಾದರೆ ಆ ಮನೆಯಲ್ಲಿ ಅತ್ತೆ, ಮೈದುನ ಮತ್ತು ಮಾವನ ಜೀವಕ್ಕೆ ಅಪಾಯವಿದೆ