Widgets Magazine

ಗುರುವಾರ ಜನಿಸಿದವರು ಈ ಉದ್ಯೋಗ ಮಾಡಿದರೆ ಯಶಸ್ಸು ಖಂಡಿತಾ

ಬೆಂಗಳೂರು| Krishnaveni K| Last Modified ಸೋಮವಾರ, 4 ಫೆಬ್ರವರಿ 2019 (08:50 IST)
ಬೆಂಗಳೂರು: ನಿಮ್ಮ ಜನ್ಮ ದಿನಕ್ಕೆ ಅನುಗುಣವಾಗಿ ಯಾವ ಉದ್ಯೋಗ ಮಾಡಿದರೆ ನಿಮಗೆ ಯಶಸ್ಸು ಸಿಗುತ್ತದೆ ನೋಡೋಣ. ಗುರುವಾರ ಜನಿಸಿದವರು ಯಾವ ಉದ್ಯೋಗ ಮಾಡಬೇಕು? ಇಲ್ಲಿದೆ ನೋಡಿ.
 
ಗುರುವಾರ ಗುರು ಗ್ರಹನ ಪ್ರಭಾವ ಹೆಚ್ಚು. ಈ ದಿನ ಜನಿಸಿದವರು ಸಾಮಾನ್ಯವಾಗಿ ಧನು, ಮೀನ ರಾಶಿಯವರಾಗಿರುತ್ತಾರೆ. ಈ ರಾಶಿಯಲ್ಲಿ ಹುಟ್ಟಿದವರಿಗೆ ಹಠಮಾರಿತನ, ಶ್ರೀಮಂತಿಕೆ, ಕೊಂಚ ಸ್ವಾರ್ಥವೂ ಇರುತ್ತದೆ.
 
ಈ ದಿನ ಜನಿಸಿದವರಿಗೆ ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡಿಕೊಂಡಿರಲು ಕಷ್ಟ. ಇವರು ಸ್ವ ಉದ್ಯೋಗ, ವ್ಯವಹಾರ, ಉದ್ಯಮ ಆರಂಭಿಸಿದರೆ ಯಶಸ್ಸು ಕಾಣುತ್ತಾರೆ. ಯಾಕೆಂದರೆ ಇವರು ಹಣಕಾಸಿನ ವಿಚಾರದಲ್ಲಿ ತುಂಬಾ ಲೆಕ್ಕಾಚಾರ ಮಾಡುತ್ತಾರೆ. ಅನವಶ್ಯಕವಾಗಿ ದುಂದು ವೆಚ್ಚ ಮಾಡುವವರಲ್ಲ. ಲೆಕ್ಕಾಚಾರದ ಮನುಷ್ಯರಾದ್ದರಿಂದ ವ್ಯವಹಾರವೇ ಇವರಿಗೆ ಸೂಕ್ತ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :