ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಿರುತ್ತದೆ. ದಿನಕ್ಕೊಂದು ರಾಶಿಯವರ ಗುಣ ಮತ್ತು ಅವಗುಣಗಳನ್ನು ತಿಳಿಯುತ್ತಾ ಸಾಗೋಣ.ಮಿಥುನ ರಾಶಿ ಈ ರಾಶಿಯವರ ಸಕಾರಾತ್ಮಕ ಅಂಶವೆಂದರೆ ಇವರು ತಮ್ಮ ಬುದ್ಧಿವಂತಿಕೆ, ಸ್ನೇಹ ಮನೋಭಾವದಿಂದಾಗಿ ಪ್ರಭಾವಶಾಲಿಗಳಾಗಿರುತ್ತಾರೆ. ಇವರು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳಬಲ್ಲರು. ಮೃದುಭಾಷಿಗಳು ಮತ್ತು ಹೇಳಬೇಕಾದ್ದನ್ನು ಪರಿಣಾಮಕಾರಿಯಾಗಿ ಹೇಳುವರು. ಇವರು ಭಾಷೆ ಮೇಲೆ ಉತ್ತಮ ಹಿಡಿತ ಹೊಂದಿರುತ್ತಾರೆ.ಅವಗುಣಗಳೆಂದರೆ, ಇವರು ಬೇಗನೇ ತಾಳ್ಮೆ ಕಳೆದುಕೊಳ್ಳುತ್ತಾರೆ. ಬೇಗನೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಮತ್ತು ಗಮನ ಕಳೆದುಕೊಳ್ಳುತ್ತಾರೆ.