ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಿರುತ್ತದೆ. ದಿನಕ್ಕೊಂದು ರಾಶಿಯವರ ಗುಣ ಮತ್ತು ಅವಗುಣಗಳನ್ನು ತಿಳಿಯುತ್ತಾ ಸಾಗೋಣ.ವೃಶ್ಚಿಕಾ ರಾಶಿ ಈ ರಾಶಿಯವರು ತುಂಬಾ ಭಾವುಕರು. ಹಾಗೆಯೇ ಭಾವನಾತ್ಮಕ ವಿಚಾರಗಳಲ್ಲಿ ಅತೀ ಎನಿಸುವ ವರ್ತನೆ ಇವರದ್ದು. ಈ ರಾಶಿಯವರು ಯಾವುದೇ ವ್ಯಕ್ತಿಗಳನ್ನು ಸೂಕ್ಷ್ಮವಾಗಿ ಗಮನಿಸುವ ಮತ್ತು ಅವರೊಂದಿಗೆ ಉತ್ತಮ ಸಂಬಂಧ ಏರ್ಪಡಿಸುವ ಕಲೆ ಹೊಂದಿರುತ್ತಾರೆ.ಅವಗುಣಗಳೆಂದರೆ, ಇವರು ಎಷ್ಟು ಭಾವುಕರೋ ಅಷ್ಟೇ ಅದನ್ನು ದುರ್ಬಳಕೆ ಕೂಡಾ ಮಾಡುವರು. ಸಂಶಯ, ಭಯ ಜಾಸ್ತಿ.