ಬೆಂಗಳೂರು : ಲೈಂಗಿಕ ಸಂಬಂಧ ದಾಂಪತ್ಯ ಜೀವನವನ್ನು ಗಟ್ಟಿಯಾಗಿಸುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಸಮಯದಲ್ಲಿ ಸಂಬಂಧ ಬೆಳೆಸಬಾರದಂತೆ. ಇದರಿಂದ ಜೀವನ ಸುಖಕರವಾಗುವ ಬದಲು ದರಿದ್ರ ಬೆನ್ನು ಹತ್ತುತ್ತದೆಯಂತೆ.ಅದು ಯಾವ ಸಮಯ ಎಂಬುದನ್ನು ಗ್ರಂಥದಲ್ಲಿ ತಿಳಿಸಲಾಗಿದೆ. ಯಾವುದೇ ನದಿ ದಂಡೆ ಮೇಲೆ ಅಥವಾ ನದಿ ಬಳಿ ಶಾರೀರಿಕ ಸಂಬಂಧ ಬೆಳೆಸಬಾರದು. ನೀರಿನ ಝುಳು ಝುಳು ಶಬ್ಧವನ್ನು ದಂಪತಿ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಕೇಳಬಾರದು ಎಂದು ಗ್ರಂಥದಲ್ಲಿ ಹೇಳಲಾಗಿದೆ.