ಹೊಸ್ತಿಲಿಗೆ ರಂಗೋಲಿ ಹಾಕುವ ಮೊದಲು ಈ ವಿಚಾರ ತಿಳಿಯಿರಿ

ಬೆಂಗಳೂರು, ಶನಿವಾರ, 2 ಫೆಬ್ರವರಿ 2019 (09:05 IST)

ಬೆಂಗಳೂರು: ಪ್ರತಿ ನಿತ್ಯ ಬೆಳಿಗ್ಗೆ ಹೊಸ್ತಿಲಿಗೆ ರಂಗೋಲಿ ಹಾಕುವ ಕ್ರಮವನ್ನು ಕೆಲವರು ಇನ್ನೂ ಬೆಳೆಸಿಕೊಂಡಿದ್ದಾರೆ. ಆದರೆ ರಂಗೋಲಿ ಹಾಕುವ ಮೊದಲು ಈ ಕೆಲವು ವಿಚಾರಗಳು, ಅದರ ಮಹತ್ವಗಳನ್ನು, ಕ್ರಮಗಳನ್ನು ತಿಳಿದುಕೊಂಡರೆ ಮತ್ತಷ್ಟು ಫಲ ಪ್ರಾಪ್ತಿಯಾಗುತ್ತದೆ.


 
ಮನುಷ್ಯನ ದೇಹಕ್ಕೆ ತಲೆ ಹೇಗೆ ಶ್ರೇಷ್ಠ ಭಾಗವೋ ಹಾಗೇ ಮನೆಗೆ ಹೊಸ್ತಿಲಿನ ಭಾಗ ಮುಖ್ಯ. ಅದನ್ನು ನಾವು ತಲೆಬಾಗಿಲು ಎಂದೇ ಕರೆಯುತ್ತೇವೆ. ಇಲ್ಲಿ ದಿನಾ ತೊಳೆದು ರಂಗೋಲಿ ಹಾಕುವುದರಿಂದ ಲಕ್ಷ್ಮೀ ಪ್ರಸನ್ನತೆ ದೊರೆಯುತ್ತದೆ. ಯಾವ ದುಷ್ಟ ಶಕ್ತಿಯೂ ರಂಗೋಲಿ ದಾಟಿ ಮನೆ ಒಳಗೆ ಬರದು.
 
ಹೊಸ್ತಿಲನ್ನು ನಾವು ಎರಡು ಭಾಗವಾಗಿ ಮಾಡಿದಾಗ ಒಂದು ಎಡ, ಮತ್ತು ಬಲ ಮಧ್ಯೆ ಒಳ ಬರುತ್ತಿರುವ ಹಾಗೆ ಗೌರಿ ಪಾದ ಎಡಕ್ಕೆ ಹನ್ನೆರಡು ಎಳೆ ಮತ್ತು ಬಲಕ್ಕೆ ಹನ್ನೆರಡು ಎಳೆ ಒಟ್ಟು 24 ಎಳೆ ಬಿಡಿಸಬೇಕು.
 
ಯಾಕೆ 24 ಎಳೆ ಅಂದರೆ ಅವು ಭಗವನ್ನಾಮಗಳು. ನಂತರ ಎರಡು ಶಂಖ, ಎರಡು ಚಕ್ರ, ಬಿಡಿಸಬೇಕು. ಇದು ವಿಷ್ಣುವಿನ ಲಾಂಛನಗಳು. ಎಲ್ಲಿ ಶಂಖ, ಚಕ್ರವಿರುತ್ತದೋ ಅಲ್ಲಿ ವಿಷ್ಣುವಿರುತ್ತಾನೆ. ಅವನಿರುವಲ್ಲಿ ಲಕ್ಷ್ಮೀ ದೇವಿಯೂ ಇರುತ್ತಾಳೆ.
 
ನಂತರ, ನಾಲ್ಕು ಸ್ವಸ್ತಿಕ ಎಡಕ್ಕೆ ಎರಡು ಮತ್ತು ಬಲಕ್ಕೆ ಎರಡು ಹಾಕಬೇಕು. ಸ್ವಸ್ತಿಕ ಹಾಕಿದರೆ ಮನೆ ಸ್ವಸ್ತವಾಗಿರುತ್ತದೆ. ಹೊಸ್ತಲಿನ ರಂಗೋಲಿ ಮುಗಿಸಿ ಬಾಗಿಲಿನ ಎಡ ಜಯ ಮತ್ತು ಬಲ ವಿಜಯ ಹಾಕಬೇಕು. ಅಲ್ಲಿ ಕೂಡಾ ಶಂಖ ಚಕ್ರ, ಗದೆ ಮತ್ತು ಕಮಲವನ್ನು ಬಿಡಿಸಬೇಕು.
 
ನಂತರ ತುಳಸಿ ಮುಂದೆ ಪದ್ಮವನ್ನು ಶಂಖ ಚಕ್ರ ಆಕಳ ಪಾದ ಹಾಕಿ. ಒಂದು ಹೊತ್ತಾದರೂ ತುಳಸಿ ಮುಂದೆ ದೀಪ ಹಚ್ಚಿ. ನಿಮಗೆ ಸಮಯವಿಲ್ಲದಿದ್ದರೂ ಕೆಲವು ನಿಯಮಗಳನ್ನಾದರೂ ಪಾಲಿಸಿ. ತಾನಾಗಿಯೇ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಕನ್ಯಾ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?

ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ನಿರಪರಾಧಿಯನ್ನು ಸತಾಯಿಸಿದರೆ ಅದರ ಫಲವೇನಾಗುತ್ತದೆ ಗೊತ್ತಾ?

ಬೆಂಗಳೂರು: ನೂರು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ...

news

ಸೋಮವಾರ ಜನಿಸಿದವರು ಈ ಉದ್ಯೋಗ ಮಾಡಿದರೆ ಯಶಸ್ಸು ಖಂಡಿತಾ

ಬೆಂಗಳೂರು: ನಿಮ್ಮ ಜನ್ಮ ದಿನಕ್ಕೆ ಅನುಗುಣವಾಗಿ ಯಾವ ಉದ್ಯೋಗ ಮಾಡಿದರೆ ನಿಮಗೆ ಯಶಸ್ಸು ಸಿಗುತ್ತದೆ ನೋಡೋಣ. ...