ನಿಮಗೆ ಈ ರೀತಿ ಆಗುತ್ತಿದ್ದರೆ ಅದು ಅದೃಷ್ಟದ ಸಂಕೇತ!

ಬೆಂಗಳೂರು, ಬುಧವಾರ, 16 ಜನವರಿ 2019 (09:23 IST)

ಬೆಂಗಳೂರು: ಕೆಲವೊಂದು ಘಟನೆಗಳೂ ಸುಮ್ಮನೇ ನಡೆಯುವುದಿಲ್ಲ. ಅದು ನಮ್ಮ ಜೀವನದಲ್ಲಿ ಮುಂದೆ ತರಬಹುದಾದ ಅದೃಷ್ಟದ ಸಂಕೇತಗಳಾಗಿರುತ್ತವೆ. ಹಾಗಿದ್ದರೆ ಅದೃಷ್ಟದ ಸಂಕೇತಗಳು ಯಾವುವು ನೋಡೋಣ.


 
ಹಕ್ಕಿ ಪಿಕ್ಕೆ
ಹಕ್ಕಿ ಪಿಕ್ಕೆ ತಲೆ ಮೇಲೆ ಬಿದ್ದರೆ ಛೀ ಎಂದು ಹಿಡಿಶಾಪ ಹಾಕುತ್ತೇವೆ. ಆದರೆ ಈ ರೀತಿ ಹಕ್ಕಿ ಪಿಕ್ಕೆ ತಲೆ ಮೇಲೆ ಬಿದ್ದರೆ ಅದು ಶುಭ ಶಕುನವಂತೆ. ಹೀಗಾಗಿ ಇನ್ನು ಮುಂದೆ ಹಕ್ಕಿ ಪಿಕ್ಕೆ ಬಿದ್ದರೆ ಖುಷಿಪಡಿ!
 
ಮನೆಯಲ್ಲಿ ಚಿಟ್ಟೆ ಓಡಾಡುವುದು
ಮನೆಯೊಳಗೆ ಚಿಟ್ಟೆ ಓಡಾಡುವಾಗ ಏನೋ ಒಂಥರಾ ಖುಷಿಯಾಗುತ್ತದೆ. ಮನೆಯಲ್ಲಿರುವ ಮಕ್ಕಳಂತೂ ಅದನ್ನು ಹಿಡಿಯಲು ಹಿಂದೇ ಓಡುತ್ತಾರೆ. ಈ ರೀತಿ ಆಗುತ್ತಿದ್ದರೆ ನಮ್ಮ ಮನೆಗೆ ಶುಭ ಸುದ್ದಿ ಹೊತ್ತು ಯಾರೋ ಅತಿಥಿಗಳು ಆಗಮಿಸುತ್ತಾರೆ ಎಂದರ್ಥ.
 
ಬಟ್ಟೆ ಮಗುಚಿ ಧರಿಸುವುದು
ಕೆಲವೊಮ್ಮೆ ಬಟ್ಟೆ ಧರಿಸುವಾಗ ಸರಿಯಾಗಿ ನೋಡದೇ ಒಳಗಿನ ಭಾಗ ಹೊರಗೆ ಇರುವಂತೆ ಧರಿಸಿ ಮುಜುಗರಕ್ಕೀಡಾಗುತ್ತೇವೆ. ಆದರೆ ಇದು ಆಗ ನೀವು ದುಃಖದಲ್ಲಿದ್ದರೆ ಮುಂದೆ ಸಂತಸ ಎದುರಾಗಲಿದೆ ಎಂಬುದರ ಸಂಕೇತವೆಂಬುದನ್ನು ಮರೆಯಬೇಡಿ.
 
ಪಶುಗಳು ಎದುರಾಗುವುದು
ದಾರಿಯಲ್ಲಿ ಹೋಗುವಾಗ ದನಗಳ ಹಿಂಡು ಎದುರಾದರೆ ಮುಂದೆ ನಿಮಗೆ ಸಂತಸ, ನೆಮ್ಮದಿ ಮತ್ತು ಯಶಸ್ಸು ಸಿಗುತ್ತದೆ ಎಂಬುದರ ಸಂಕೇತ.
 
ಕಾಮನಬಿಲ್ಲು
ಕಾಮನ ಬಿಲ್ಲು ಅನಿರೀಕ್ಷಿತವಾಗಿ ಆಕಾಶದಲ್ಲಿ ಕಂಡಾಗ ನೋಡಲು ಎಷ್ಟೊಂದು ಖುಷಿ ಕೊಡುತ್ತದೆ. ಅಷ್ಟೇ ಇದನ್ನು ನೋಡುವುದೂ ಶುಭ ಸಂಕೇತ. ಕಾಮನಬಿಲ್ಲು ಕಂಡರೆ ನೀವು ಕೈ ಹಿಡಿದಿರುವ ಕೆಲಸಗಳಲ್ಲಿ, ಉದ್ಯೋಗದಲ್ಲಿ ಮುಂದೆ ಜಯ ಸಿಗುತ್ತದೆ ಎಂಬುದರ ಸಂಕೇತವೆಂದು ಪರಿಗಣಿಸಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಹಣಕಾಸು ಸ್ಥಿತಿ ಸುಧಾರಿಸಲು ಈ ಕೆಲಸ ಮಾಡಿದರೆ ಸಾಕು

ಬೆಂಗಳೂರು: ಜೀವನದಲ್ಲಿ ಏನೇ ಮಾಡಿದರೂ ಆರ್ಥಿಕವಾಗಿ ಚೇತರಿಕೆ ಕಾಣುತ್ತಿಲ್ಲ ಎಂದರೆ ಕೆಲವೊಮ್ಮೆ ನಮ್ಮ ...

news

ಕನ್ಯಾ ರಾಶಿಯವರಿಗೆ ಯಾವ ಉದ್ಯೋಗ ಸೂಕ್ತ?

ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ವ್ಯತ್ಯಸ್ಥವಾಗಿರುತ್ತದೆ. ಹಾಗಿರುವಾಗ ಕನ್ಯಾ ರಾಶಿಯವರ ಗುಣ ...

news

ತುಲಾ ರಾಶಿಯವರಿಗೆ ಈ ಸಂಖ್ಯೆ ಅದೃಷ್ಟ ತರುತ್ತದೆ!

ಬೆಂಗಳೂರು: ಒಂದೊಂದು ರಾಶಿಯವರಿಗೆ ಒಂದೊಂದು ಸಂಖ್ಯೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದ ಪ್ರಕಾರ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.