ಸುಮಾರು 2 ತಿಂಗಳು ಶುಭಕಾರ್ಯಗಳನ್ನು ಮಾಡಲು ಮುಹೂರ್ತಗಳಿಲ್ಲವೆಂದು ಕೆಲವು ಪುರೋಹಿತರು ಹಾಗೂ ಜ್ಯೋತಿಷ್ಯರು ಪ್ರಚಾರಪಡಿಸುತ್ತಿದ್ದಾರೆ. ಇದು ತಪ್ಪು ಎನಿಸುತ್ತದೆ. ಮುಹೂರ್ತ ಗ್ರಂಥಗಳ ಪೂರ್ಣ ಅಧ್ಯಯನ ಮಾಡಿರುವುದಿಲ್ಲ ಎನಿಸುತ್ತದೆ. ಯಾವುದೇ ಶಾಸ್ತ್ತ್ರಗಳು ಮನುಷ್ಯನ ಪ್ರಗತಿಗೆ ಪೂರಕವಾಗಬೇಕೇ ಹೊರತು ಮಾರಕವಾಗಬಾರದು ಪ್ರತಿಯೊಂದಕ್ಕೂ ಜ್ಯೋತಿಷ್ಯ ಗ್ರಂಥಗಳಲ್ಲಿ ಪರ್ಯಾಯ ವ್ಯವಸ್ಥೆ ಇದ್ದೇ ಇರುತ್ತದೆ ಅದನ್ನು ನಾವು ಗಮನಿಸಿ ಸೂಕ್ತ ಸಮಯಗಳಲ್ಲಿ ಬಳಸಿಕೊಳ್ಳಬೇಕು. ಈಗ ಶುಭಕಾರ್ಯಗಳಿಗೆ ಮುಹೂರ್ತಗಳಿಲ್ಲವೆನ್ನುವುದಕ್ಕೆ ಶುಕ್ರ ಕಾರಣ. ಈ ಶುಕ್ರನು ಫೆಬ್ರವರಿ