ಬೆಂಗಳೂರು: ಕೆಲವೊಂದು ಸಂಖ್ಯೆ ಕೆಲವರಿಗೆ ಅದೃಷ್ಟ ತರುತ್ತದೆ ಎಂದು ಸಂಖ್ಯಾ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಆದರೆ ನಂ.7 ಎಂಬುದು ಎಲ್ಲರಿಗೂ ಶುಭ ತರುವ ಸಂಖ್ಯೆ.ಭಾರತೀಯ ಕ್ರಿಕೆಟ್ ನ ಪ್ರಮುಖ ಆಟಗಾರ ಧೋನಿ ತಮ್ಮ ಅದೃಷ್ಟದ ಸಂಖ್ಯೆಯೆಂದು 7 ಸಂಖ್ಯೆಯ ಜೆರ್ಸಿ ತೊಡುವುದನ್ನು ನೀವು ಗಮನಿಸಿರಬಹುದು. ಏಳು ಎಂಬ ಸಂಖ್ಯೆ ಧೋನಿ ಜೀವನದಲ್ಲಿ ಎಷ್ಟು ಲಕ್ಕಿ ಎಂದು ನಾವು ನೋಡಿದ್ದೇವೆ.ಇವರಿಗೆ ಮಾತ್ರವಲ್ಲ, ಸಾಮಾನ್ಯವಾಗಿ ಈ ಸಂಖ್ಯೆಯನ್ನು ಅಳವಡಿಸಿಕೊಳ್ಳುವ ವ್ಯಕ್ತಿಗಳು ಯಾರೇ ಆಗಿದ್ದರೂ ಅದೃಷ್ಟಶಾಲಿಗಳಾಗುತ್ತಾರೆ.