ಬೆಂಗಳೂರು: ಬೇಡಿದ ವರಗಳನ್ನು ಕರುಣಿಸುವ ವರಮಹಾಲಕ್ಷ್ಮಿ ದೇವಿಯ ವ್ರತವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ಹತ್ತಿರದ ಶುಕ್ರವಾರ ಆಚರಿಸಲಾಗುತ್ತಿದೆ. ನಾಳೆ ವರಮಹಾಲಕ್ಷ್ಮಿ ಹಬ್ಬವಿದ್ದು, ಈ ದಿನ ಪೂಜೆಗೆ ಯಾವೆಲ್ಲಾ ಸಾಮಗ್ರಿಗಳು ಇರಬೇಕು ಎನ್ನುವುದನ್ನು ನೋಡೋಣ.ಈ ದಿನ ಲಕ್ಷ್ಮೀ ದೇವಿಗೆ ಪೂಜೆ ಮಾಡಿ. ಸಾಮಾನ್ಯವಾಗಿ ಮನೆಯಲ್ಲಿರುವ ವಸ್ತುಗಳು ಮತ್ತು ಯೋಗ್ಯತಾನುಸಾರ ವಸ್ತುಗಳನ್ನು ಉಪಯೋಗಿಸಿ ಪೂಜೆ ಮಾಡಬಹುದು.ರಂಗೋಲಿ, ಮಣೆ ಅಥವಾ ಮಂಟಪ, ದೇವಿಯ ವಿಗ್ರಹ, ಕಲಶ, ದೀಪ, ತುಪ್ಪ, ಎಣ್ಣೆ, ಬತ್ತಿ,