ಪೂರ್ಣ ಚಂದ್ರಗ್ರಹಣ ಸಂಭವಿಸಿದಾಗ ಈ ಗ್ರಹಣವು ಸಾರೋಸ್ ಸರಣಿಯಲ್ಲಿ 135 ನೇಯದಾಗಿದ್ದು, 71 ಗ್ರಹಣಗಳಲ್ಲಿ ಇದು 23ನೇಯದಾಗಿರುತ್ತದೆ. ಈ ಗ್ರಹಣವು ಭೂಮಿಯ ಎಲ್ಲಾ ಭಾಗಗಳಲ್ಲಿ ಗೋಚರಿಸುತ್ತದೆ. ಏಷ್ಯಾ ಮತ್ತು ಆಸ್ಟ್ತ್ರೇಲಿಯಾಗಳಲ್ಲಿ ಗ್ರಹಣದ ಎಲ್ಲಾ ಹಂತಗಳನ್ನು ನೋಡಬಹುದು. ಉತ್ತರ ಅಮೇರಿಕಾದಲ್ಲಿ ಗ್ರಸ್ತ ಚಂದ್ರ ಮುಳುಗುವುದರಿಂದ ಪೂರ್ಣ ಗೋಚರಿಸುವುದಿಲ್ಲ. ಯುರೋಪ್ ಮತ್ತು ಆಫ್ರಿಕ ದೇಶಗಳಲ್ಲಿ ಗ್ರಹಣ ಸ್ಪರ್ಶ ಕಾಲ ಕಂಡುಬರುವುದಿಲ್ಲ. ಗ್ರಸ್ತೌದಿತ ಚಂದ್ರ ಗ್ರಹಣವನ್ನು ವೀಕ್ಷಿಸಬಹುದು. ದಕ್ಷಿಣ ಅಮೇರಿಕಾ ಮತ್ತು ಅಂಟಾರ್ಟಿಕಾದಲ್ಲಿ