ಬೆಂಗಳೂರು: ಮಿಥುನ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ಅದಕ್ಕಿರುವ ಪರಿಹಾರವೇನು ನೋಡೋಣ.ಸಾಮಾನ್ಯವಾಗಿ ಮಿಥುನ ರಾಶಿಯ ದಂಪತಿ ಅನ್ಯೋನ್ಯವಾಗಿರುತ್ತಾರೆ. ಇವರ ದಾಂಪತ್ಯ ಜೀವನದಲ್ಲಿ ಸಾಮರಸ್ಯ, ಸರಸ ಧಾರಾಳವಾಗಿರುತ್ತದೆ. ಹಾಗಿದ್ದರೂ ಅಪವಾದವೆಂಬಂತೆ ಕಲಹವೇರ್ಪಡುತ್ತಿದ್ದರೆ ಅದಕ್ಕೆ ಕುಜ ಗ್ರಹ ಕಾರಣವಾಗಿರುತ್ತಾನೆ.ಹೀಗಾಗಿ ಈ ರಾಶಿಯವರು ತಮ್ಮ ಉಡುಗೆ ತೊಡುಗೆ, ಮನೆ, ಇತ್ಯಾದಿಗಳಲ್ಲಿ ಕೆಂಪು ಬಣ್ಣ ಬಳಕೆ ಕಡಿಮೆ ಮಾಡಬೇಕು. ಆದಷ್ಟು ಬೆಳ್ಳಿ ಮತ್ತು ಬಿಳಿ ಬಣ್ಣಕ್ಕೆ ಪ್ರಾಶಸ್ತ್ಯ ನೀಡಬೇಕು.