ಬೆಂಗಳೂರು: ಹಿರಿಯರು ಮಂಗಳವಾರ, ಶನಿವಾರ ಹೊಸ ವಸ್ತ್ರ ಖರೀದಿ ಮಾಡಬೇಡ ಎಂದು ಹೇಳುವುದನ್ನು ಕೇಳುತ್ತೇವೆ. ಹಾಗಿದ್ದರೆ ಹೊಸ ವಸ್ತ್ರ ಖರೀದಿಗೆ ಮತ್ತು ಧರಿಸಲು ಶುಭ ದಿನ ಯಾವುದು?ಹೊಸ ವಸ್ತ್ರ ಖರೀದಿಸಲು ಮತ್ತು ಧರಿಸಲು ಶುಭ ದಿನ ನೋಡಿ ಅದೇ ದಿನ ಮಾಡಿದರೆ ನಮ್ಮಲ್ಲಿ ವಸ್ತ್ರ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.ಇದಕ್ಕಾಗಿ ಬುಧವಾರ, ಗುರುವಾರ, ಶುಕ್ರವಾರ ಹೊಸ ವಸ್ತ್ರಗಳನ್ನು ಖರೀದಿಸಬಹುದು. ಹಾಗೆಯೇ ಕೆಲವೊಂದು ತಿಥಿಯಂದೂ ಹೊಸ ವಸ್ತ್ರ ಧಾರಣೆ ಅಥವಾ ಖರೀದಿ ಮಾಡಬೇಡಿ.