ನಿಮ್ಮ ರಾಶಿಗನುಗುಣವಾಗಿ ಯಾವ ಬಣ್ಣ ತೊಡಬೇಕು?

ಬೆಂಗಳೂರು, ಬುಧವಾರ, 9 ಜನವರಿ 2019 (09:02 IST)

ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಬಣ್ಣ ಹೊಂದುತ್ತದೆ. ಹಾಗೆಯೇ ಕೆಲವೊಂದು ಬಣ್ಣ ತೊಡುವುದರಿಂದ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಯಾವ ರಾಶಿಯವರು ಯಾವ ಬ‍ಣ್ಣಕ್ಕೆ  ಪ್ರಾಶಸ್ತ್ಯ ನೀಡಬೇಕು? ಇಲ್ಲಿದೆ ನೋಡಿ.


 
ಮೇಷ: ಹಳದಿ, ಹಸಿರು ಬಣ್ಣದ ಉಡುಗೆಗಳು ಶುಭಪ್ರದ. ಶುಭ ಸಂದರ್ಭಗಳಲ್ಲಿ ಕೆಂಪು ಬಣ್ಣದ ಉಡುಗೆ ಬೇಡ.
 
ವೃಷಭ: ಆಪಲ್ ಗ್ರೀನ್, ಕಡು ಕೆಂಪು ಬಣ್ಣದ ಉಡುಗೆ ನಿಮಗೆ ಅದೃಷ್ಟ ತರುತ್ತದೆ.
 
ಮಿಥುನ: ಬಿಳಿ, ನಸು ಬೂದು ಬಣ್ಣದ ಉಡುಗೆ ಉತ್ತಮ. ಬುಧವಾರಗಳಂದು ಹಸಿರು ಬಣ್ಣದ ಉಡುಗೆ ತೊಟ್ಟರೆ ಅದೃಷ್ಟ ಖುಲಾಯಿಸುತ್ತದೆ.
 
ಕರ್ಕಟಕ: ನೀಲಿ ಮತ್ತು ಕೆಂಪು ಬಣ್ಣದ ಉಡುಗೆ ಶುಭದಾಯಕ. ಸೋಮವಾರಗಳಂದು ಸಮುದ್ರ ನೀಲ, ಅಥವಾ ಹಸಿರು ಬಣ್ಣದ ಉಡುಗೆ ತೊಟ್ಟರೆ ಒಳ್ಳೆಯದಾಗುತ್ತದೆ.
 
ಸಿಂಹ: ಬಿಳಿ ಮತ್ತು ಚಿನ್ನದ ಬಣ್ಣದ ವಸ್ತ್ರಗಳು ನಿಮಗೆ ಅದೃಷ್ಟ ತರುತ್ತವೆ. ಹಾಗೆಯೇ ಕಂದು ಬಣ್ಣ, ತಿಳಿ ಹಸಿರು ಬಣ್ಣಗಳೂ ಉತ್ತಮ.
 
ಕನ್ಯಾ: ಹಸಿರು, ನೀಲ, ಬಣ್ಣ ಅದೃಷ್ಟಶಾಲಿ. ಅದರಲ್ಲೂ ಬುಧವಾರಗಳಂದು ಹಸಿರು ಬಣ್ಣದ ತೊಡುಗೆ ಮತ್ತಷ್ಟು ಶುಭಪ್ರದ.
 
ತುಲಾ:ಬಿಳಿ, ಹಸಿರು, ಮತ್ತು ನೀಲ ಬಣ್ಣದ ಉಡುಗೆ ನಿಮಗೆ ಶುಭ ಫಲ ಕೊಡಲಿದೆ. ಅದರಲ್ಲೂ ಶುಕ್ರವಾರಗಳಂದು ಕ್ರೀಮ್ ಕಲರ್ ಮತ್ತು ಬಿಳಿ ಬಣ್ಣದ ಉಡುಪು ಧರಿಸಿ.
 
ವೃಶ್ಚಿಕಾ: ಬೂದು, ನೀಲ ಮತ್ತು ಬಿಳಿ ಬಣ್ಣದ ವಸ್ತ್ರಗಳು ಅದೃಷ್ಟ ತರುತ್ತವೆ.
 
ಧನು: ಹಸಿರು, ಕೇಸರಿ, ಮತ್ತು ಮಂಗಳವಾರಗಳಂದು ಹಳದಿ ಉಡುಪು ಧರಿಸುವುದರಿಂದ ಅದೃಷ್ಟ.
 
ಮಕರ: ನೀಲ ಮತ್ತು ಹಸಿರುವ ಬಣ್ಣ ನಿಮಗೆ ಶುಭ ಪ್ರದವಾಗಲಿದೆ.
 
ಕುಂಭ: ಕೆಂಪು, ಆಕಾಶ ನೀಲ ಮತ್ತು ಹಸಿರು ಬಣ್ಣದ ಉಡುಗೆ ತೊಟ್ಟರೆ ಅದೃಷ್ಟ ಬರುತ್ತದೆ.
 
ಮೀನ: ಆದಷ್ಟು ಹಸಿರು ಬಣ್ಣದ ಉಡುಗೆ ತೊಡಿ. ಮಂಗಳವಾರಗಳಂದು ತಿಳಿ ಹಳದಿ ಉಡುಗೆ ಉತ್ತಮ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

news

ದಿನಕ್ಕೊಂದು ರಾಶಿ: ತುಲಾ ರಾಶಿಯ ದಂಪತಿ ನಡುವೆ ಕಲಹವೇರ್ಪಡುತ್ತಿದ್ದರೆ ಏನು ಪರಿಹಾರ?

ಬೆಂಗಳೂರು: ತುಲಾ ರಾಶಿಯ ದಂಪತಿ ಪ್ರತಿನಿತ್ಯ ಜಗಳವಾಡುತ್ತಿದ್ದರೆ ಅದಕ್ಕೆ ಯಾವ ದೋಷ ಕಾರಣ ಮತ್ತು ...

news

ನಿಮ್ಮ ಹೆಸರಿನಲ್ಲಿರುವ ಈ ಆಂಗ್ಲ ಅಕ್ಷರಗಳಿಂದ ನೀವು ಎಂಥವರು ತಿಳಿಯಬಹುದು!

ಬೆಂಗಳೂರು: ನಾಮಕರಣ ಎನ್ನುವುದು ಹಿಂದೂ ಸಂಪ್ರದಾಯದಲ್ಲಿ ಪ್ರಾಮುಖ್ಯ ಜೀವನದ ಘಟ್ಟ. ಹೆಸರು ಎನ್ನುವುದು ನಮ್ಮ ...

news

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.