ಸ್ವಾತಿ ನಕ್ಷತ್ರದವರು ಯಾವ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಬೆಂಗಳೂರು| Krishnaveni K| Last Modified ಶುಕ್ರವಾರ, 15 ಮಾರ್ಚ್ 2019 (09:05 IST)
ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.
 
ಕಪ್ಪೆ ಚಿಪ್ಪಿನೊಳಗಿರುವ ಮುತ್ತಿನಷ್ಟೇ ಪರಿಶುದ್ಧ ವ್ಯಕ್ತಿತ್ವ ಸ್ವಾತಿ ನಕ್ಷತ್ರದವರದ್ದು ಎನ್ನಲಾಗುತ್ತದೆ. ಇವರು ಸ್ನೇಹ ಜೀವಿಗಳು, ಮಾತುಗಾರರು, ಸಹನೆಯುಳ್ಳವರೂ ಆಗಿರತ್ತಾರೆ.
 
ಈ ನಕ್ಷತ್ರದವರು ವಾಯು, ವರುಣ, ಅಗ್ನಿ ಮತ್ತು ಸರಸ್ವತಿ ದೇವಿಯನ್ನು ಪೂಜೆ ಮಾಡಬೇಕು. ಸ್ವಾತಿ ನಕ್ಷತ್ರದಂದು ವಾಯು ದೇವನ ಸ್ಮರಣೆ ಮಾಡಿದರೆ ಈ ನಕ್ಷತ್ರದವರು ಅಪಾರ ಬಲ ಮತ್ತು ಜ್ಞಾನ ಪಡೆಯುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :