ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.ವಿಶಾಖ ನಕ್ಷತ್ರದವರು ನೇರ ನುಡಿಯವರು. ಇವರ ಈ ನಡತೆಯಿಂದಾಗಿಯೇ ಕೆಲವೊಮ್ಮೆ ನಿಷ್ಠುರರಾಗುವುದೂ ಇದೆ. ಇವರು ಹೊರ ನೋಟಕ್ಕೆ ಕೊಂಚ ದರ್ಪ ನಡೆಯವರು ಎನಿಸಿದರೂ ಅಸಾಮಾನ್ಯ ನಾಯಕರಾಗುತ್ತಾರೆ.ವಿಶಾಖ ನಕ್ಷತ್ರದವರ ಅಧಿದೇವತೆ ಅಗ್ನಿ. ಹೀಗಾಗಿ ಈ ನಕ್ಷತ್ರದವರು ಪ್ರತಿನಿತ್ಯ ಕೆಂಪು ಹೂವುಗಳಿಂದ ಅಗ್ನಿದೇವನನ್ನು ಆರಾಧಿಸಿದರೆ