ಜ್ಯೇಷ್ಠ ನಕ್ಷತ್ರದವರು ಯಾವ ದೇವರನ್ನು ಪೂಜೆ ಮಾಡಿದರೆ ಏನು ಫಲ?

ಬೆಂಗಳೂರು| Krishnaveni K| Last Modified ಮಂಗಳವಾರ, 19 ಮಾರ್ಚ್ 2019 (08:43 IST)
ಬೆಂಗಳೂರು: ಒಂದೊಂದು ರಾಶಿಗೆ ಒಂದೊಂದು ಗ್ರಹದ ಪ್ರಭಾವವಿರುವಂತೆ ಒಂದೊಂದು ನಕ್ಷತ್ರಕ್ಕೂ ಒಂದೊಂದು ದೇವತೆಗಳ ಅನುಗ್ರಹವಿರುತ್ತದೆ. ಇಂದಿನಿಂದ ಒಂದೊಂದೇ ನಕ್ಷತ್ರದವರಿಗೆ ಯಾವ ದೇವರನ್ನು ಪೂಜಿಸಿದರೆ ಫಲ ಎಂದು ತಿಳಿಯುತ್ತಾ ಸಾಗೋಣ.
 
ಜ್ಯೇಷ್ಠ ನಕ್ಷತ್ರದವರು ಶ್ರೇಷ್ಠ ಸ್ಥಾನಕ್ಕೇರುತ್ತಾರೆ ಎಂಬ ಮಾತಿದೆ. ಇವರು ಅರ್ಥಶಾಸ್ತ್ರ, ರಾಜಕೀಯ ಇತ್ಯಾದಿ ನಾಯಕತ್ವ ಬಯಸುವ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಾರೆ.
 
ಈ ನಕ್ಷತ್ರದವರ ಆರಾಧ್ಯ ದೇವ ಇಂದ್ರ. ಜ್ಯೇಷ್ಠ ನಕ್ಷತ್ರದಂದು ಇಂದ್ರನನ್ನು ಪೂಜಿಸಿದರೆ ಈ ನಕ್ಷತ್ರದವರು ಜೀವನದಲ್ಲಿ ಧನ ಕನಕಾದಿಗಳನ್ನು ಪಡೆದು ಉತ್ತಮ ಸ್ಥಾನ ಮಾನ ಪಡೆಯುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :