ಬೆಂಗಳೂರು: ಪ್ರತಿಯೊಂದು ರಾಶಿಯವರ ಗುಣ ಸ್ವಭಾವ ಬೇರೆ ಬೇರೆಯದ್ದಾಗಿರುತ್ತದೆ. ಅದೇ ರೀತಿ ಪ್ರತಿಯೊಂದು ರಾಶಿಯವರಿಗೂ ಒಂದೊಂದು ಋಣಾತ್ಮಕ ಅಂಶ ಅಥವಾ ಈ ವಿಚಾರ ನನಗೆ ಕಷ್ಟ ಎನ್ನುವುದು ಇದ್ದೇ ಇರುತ್ತದೆ. ಯಾವ ರಾಶಿಯವರಿಗೆ ಯಾವ ವಿಚಾರಗಳು ವೀಕ್ನೆಸ್ ಆಗಿರುತ್ತದೆ ಎಂದು ನೋಡುತ್ತಾ ಸಾಗೋಣ.ತುಲಾ ಈ ರಾಶಿಯವರು ಪರಿಸ್ಥಿತಿಗೆ ತಕ್ಕ ಹಾಗೆ ತಮಗೆ ಅನಿಸಿದ್ದನ್ನು ಹೇಳಲು ಮಾಡಲು ಕಷ್ಪಡಡುತ್ತಾರೆ. ಸಂದಿಗ್ಧ ಪರಿಸ್ಥಿತಿಗಳಲ್ಲಿ ಮೌನಕ್ಕೆ ಶರಣಾಗುತ್ತಾರೆ. ಯಾವುದೇ ವಿವಾದಗಳನ್ನು ಮೈಮೇಲೆ ಹಾಕಿಕೊಳ್ಳಲು ಇಷ್ಪಪಡುವುದಿಲ್ಲ.