ಕನಸು ಕಾಣದವರಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಎಲ್ಲರೂ ಕನಸಿನ ಲೋಕದಲ್ಲಿ ವಿಹರಿಸುವವರೇ. ಇಂಥ ಕನಸುಗಳೂ ಭವಿಷ್ಯದ ಸಂಕೇತಗಳೇ... ಎಂಬ ಪ್ರಶ್ನೆ ಜ್ಯೋತಿಷಿಗಳಿಂದ ಹಿಡಿದು ವಿಜ್ಞಾನಿಗಳವರೆಗೂ ಕಾಡಿದ್ದಿದೆ. ಮನಃಶಾಸ್ತ್ರದಲ್ಲೂ ಕನಸಿನ ಲೋಕದ ಬಗ್ಗೆ ಸಾಕಷ್ಟು ಸಂಶೋಧನೆಗಳೇ ನಡೆದಿವೆ.