ಬೆಂಗಳೂರು: ಸಾಮಾನ್ಯವಾಗಿ ದೇವಾಲಯಕ್ಕೆ ಅಥವಾ ನೆಂಟರ ಮನೆಗೆ ಹೋಗುವಾಗ ಬರಿಗೈಯಲ್ಲಿ ಹೋಗಬಾರದು ಎನ್ನುತ್ತಾರೆ. ಹೀಗೇ ನಮ್ಮ ಧಾರ್ಮಿಕ ಶ್ರದ್ಧೆಯ ಪ್ರಕಾರ ಎಂಟು ಸ್ಥಳಗಳಿಗೆ ನಾವು ಬರಿಗೈಯಲ್ಲಿ ಹೋಗಬಾರದು. ಅವುಗಳು ಯಾವುವು ನೋಡೋಣ.ವೇದಸಂಪನ್ನರ ಮನೆಗೆ: ವೇದಾಧ್ಯಯನ ಸಂಪನ್ನರ ಮನೆಗೆ ಹೋಗುವಾಗ ಹೂವು, ಹಣ್ಣುಗಳನ್ನು ತೆಗೆದುಕೊಂಡು ಹೋಗಬೇಕು. ಗರ್ಭಿಣಿ ಸ್ತ್ರೀಯರನ್ನು ನೋಡಲು ಹೋಗುವಾಗ: ಹೊಟ್ಟೆಯೊಳಗೆ ಇನ್ನೊಂದು ಜೀವವಿಟ್ಟುಕೊಂಡಿರುವ ಗರ್ಭಿಣಿಯರು ಮಹಾತಾಯಿ ಎಂದೇ ಪರಿಗಣಿತರಾಗಿರುತ್ತಾರೆ. ಅವರನ್ನು ನೋಡಲು ಹೋಗುವಾಗ ಅವರ ಇಷ್ಟವಸ್ತುಗಳನ್ನು ಕೇಳಿ ತಿಳಿದು