ವಿವಾಹ ಜೀವನ ಸುಖಮಯವಾಗಿಲ್ಲದಿದ್ದರೆ ಮನೆ, ಮನಸ್ಸು ಹೇಗೆ ತಾನೇ ಸೌಖ್ಯವಾಗಿರಲು ಸಾಧ್ಯ? ಆದರೆ, ವಿವಾಹದ ನಂತರ ದಾಂಪತ್ಯ ಜೀವನ ಸುಖಕರವಾಗಿಲ್ಲದಿದ್ದರೆ, ಅದಕ್ಕೆ ಕೆಲವು ನಿಮ್ಮದಲ್ಲದ ಕಾರಣಗಳೂ ಇವೆ ಎಂಬುದನ್ನು ನೆನಪಿಟ್ಟುಕೊಳ್ಳಿ. ವಾಸ್ತವದಲ್ಲಿ ನಿಮ್ಮಿಬ್ಬರ ಮದುವೆಯಾಗಿದ್ದರೂ, ನಿಮ್ಮಿಬ್ಬರ ಜಾತಕಗಳಿಗೆ ಮದುವೆಯೇ ಆಗಿರುವುದಿಲ್ಲ. ಕಾರಣ ಅವೆರಡು ಹೊಂದಿಕೊಂಡೇ ಇರುವುದಿಲ್ಲ. ಹೀಗಾಗಿ ಇಬ್ಬರ ಜಾತಕದಲ್ಲಿ ಒಬ್ಬರದ್ದರಲ್ಲಿ ಏನಾದರೊಂದು ವ್ಯತಿರಿಕ್ತ ದೃಷ್ಟಿಯಿದ್ದರೂ ಸಾಕು ನಿಮ್ಮ ಜೀವನ ಹದಗೆಡುವ ಸಂಭವವಿದೆ. ವೈವಾಹಿಕ ಜೀವನದಲ್ಲಿ ನಿಮ್ಮ ಜಾತಕದಲ್ಲಿ ಮಂಗಳ